ಉಡುಪಿ: ಯಾವುದೇ ವಿವಾದವೇ ಇರಲಿ,ಅದರ ಹಿಂದೆ ಕಾಣದ ಕೈಗಳಿರುತ್ತವೆ. ಹಿಜಾಬ್ ಕೇಸರಿ ವಿವಾದವೂ ಅಷ್ಟೆ.ಈ ವಿವಾದ ವಿದ್ಯಾರ್ಥಿನಿಯರಿಗೆ ಬೇಕಾಗಿಲ್ಲ.ಅವರೆಲ್ಲ ಒಂದೇ ಎಂದಿನಂತೆ ಕೈಕೈ ಹಿಡಿದೇ ಕಾಲೇಜಿಗೆ ಹೋಗಿ ಬರುತ್ತಿದ್ದಾರೆ.
ಉಡುಪಿಯ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ನಿನ್ನೆಯಿಂದ ಆರಂಭಗೊಂಡಿದೆ.ಇಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.ಕಾಲೇಜಿಗೆ ಹೋಗುವಾಗ ಹಿಂದೂ ಮುಸ್ಲಿಂ ವಿದ್ಯಾರ್ಥಿನಿಯರು,ತಮಗೂ ವಿವಾದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಒಟ್ಟಿಗೇ ಹೋಗುತ್ತಿರುವುದು ಗಮನ ಸೆಳೆಯಿತು,ಅಷ್ಟೇ ಅಲ್ಲದೆ, ಹಿಜಾಬ್ ಧಾರಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಯಾವಾಗಲೂ ರೆಡಿ ಎಂಬಂತೆ ಹಿಂದೂ ಸಹಪಾಠಿಗಳು ಅವರ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಲೇಜು ಪ್ರವೇಶಿಸುವ ದೃಶ್ಯ ಭಾವೈಕ್ಯತೆಯ ಸಂದೇಶ ಸಾರುವಂತಿದೆ.
PublicNext
18/02/2022 04:06 pm