ಉಡುಪಿ: ಇದು ಸದ್ದಿಲ್ಲದ, ನಿಜ ಅರ್ಥದ ಸಮಾಜ ಸೇವೆ.ಯಾವುದೇ ಪ್ರಚಾರ ಬಯಸದೇ ,ತಾನು ಮಾಡುವ ಸಾಮಾಜಿಕ ಕಾರ್ಯ ಇನ್ನೊಬ್ವರಿಗೆ ತಿಳಿಯದಂತೆ ತೆರೆಮರೆಯಲ್ಲೇ ಸ್ಲಮ್ ಮಕ್ಕಳ ಕಣ್ಣೊರೆಸುವ,ಅವರನ್ನು ಸುಸಂಸ್ಕೃತರನ್ನಾಗಿಸುವ ಕಾಯಕ.ಇದರ ರೂವಾರಿ ಉಡುಪಿಯ ಯೋಗ ಥೆರಪಿಸ್ಟ್ ರೂಪಾ ಬಲ್ಲಾಳ್.
ಇದು ಇಂದು ನಿನ್ನೆಯ ಮಾತಲ್ಲ,ಸುಮಾರು ಒಂದೂವರೆ ದಶಕದ ಮಾನವೀಯ ಸೇವೆ.ಉತ್ತರ ಕರ್ನಾಟಕದಿಂದ ಇಲ್ಲಿಗೆ ಬಂದು ಕೂಲಿನಾಲಿ ಮಾಡಿ ದುಡಿಯುವ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಹೇಳಿ ಕೊಡುವುದರ ಜೊತೆಗೇ ಅವರಿಗೆ ಬೊಗಸೆ ತುಂಬ ಪ್ರೀತಿ ನೀಡುತ್ತಿರುವ ಮಹತ್ಕಾರ್ಯ.
ವೃತ್ತಿಯಲ್ಲಿ ಯೋಗ ತೆರಪಿಸ್ಟ್ ಆಗಿರುವ ರೂಪಾ ಬಲ್ಲಾಳ್ ಗೆ ಮಕ್ಕಳೆಂದರೆ ಅಚ್ಚುಮೆಚ್ಚು.ಅವರ ಕಷ್ಟ ಕಾರ್ಪಣ್ಯ ಮತ್ತು ತಾಪತ್ರಯ ನೋಡಿದ ರೂಪಾ ,ಹದಿನಾಲ್ಕು ವರ್ಷಗಳ ಹಿಂದೆ ವಲಸೆ ಕಾರ್ಮಿಕರೊಬ್ವರ ಮಗಳನ್ನು ಹತ್ತಿರ ಕರೆದು ಆಕೆಗೆ ಶಿಕ್ಷಣ ನೀಡಿದ್ದರು.ಅದಾದ ಮೇಲೆ ಒಂದೊಂದೇ ಮಕ್ಕಳನ್ನುಮನೆಗೆ ಕರೆದು ಇಂಗ್ಲಿಷ್ ,ಮ್ಯಾಥ್ಸ್ ಮತ್ತು ಕನ್ನಡ ಹೇಳಿಕೊಡತೊಡಗಿದರು.
ಬಳಿಕ ಮಕ್ಕಳ ಸಂಖ್ಯೆ ಜಾಸ್ತಿಯಾಯ್ತು.ತಮ್ಮ ಮನೆಗೇ ಅವರನ್ನು ಕರೆದು ಮನೆಯ ತಾರಸಿಯನ್ನೇ ಶಾಲೆಯನ್ನಾಗಿ ಮಾರ್ಪಾಡು ಮಾಡಿದ್ದಾರೆ.
ನಿತ್ಯ ಮಕ್ಕಳು ಇಲ್ಲಿಗೆ ಬರುತ್ತಾರೆ.ಎಲ್ಲರೂ ಸ್ಲಂ ನ ಮಕ್ಕಳು.ಸರಕಾರಿ ಶಾಲೆಯಲ್ಲಿ ಓದುವ ಈ ಮಕ್ಕಳಿಗೆ ಓದುವ ಕಲಿಯುವ ಪರಿಕರಗಳನ್ನು ತಾವೇ ನೀಡಿ ಓದಿಸುತ್ತಾರೆ.ಖುದ್ದು ಅವರ ಹ್ಯಾಂಡ್ ರೈಟಿಂಗ್ ಚೆಕ್ ಮಾಡುತ್ರಾರೆ.
ಇದಕ್ಕೆ ಅವರ ಪತಿ ನಾಗರಾಜ್ ಬಲ್ಲಾಳ್ ಪ್ರೋತ್ಸಾಹ ಸಹಕಾರ ನೀಡುತ್ತಾರೆ.ಅಂದಹಾಗೆ ನಾಗರಾಜ್ ಬಲ್ಲಾಳ್ ಬೇರಾರೂ ಅಲ್ಲ,ಪೇಜಾವರ ಮಠದ ವಿದ್ಯೋದಯ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ.ಪತಿ ರೂಪಾ ಬಲ್ಲಾಳ್ ಮಾಡುವ ಈ ಸೇವೆಗೆ ತಾವೂ ಪ್ರೋತ್ಸಾಹ ನೀಡುತ್ತಿದ್ದಾರೆ.
ಈ ದಂಪತಿಯ ಇಬ್ಬರು ಪುತ್ರರು ವೈದ್ಯರು. ಒಬ್ಬರು ಅಮೇರಿಕಾದಲ್ಲಿದ್ದರೆ,ಮತ್ತೊಬ್ಬರು ಉಡುಪಿಯಲ್ಲೇ ಎಂಡಿ ಆಗಿದ್ದಾರೆ.highly qualified ಕುಟುಂಬ ಇವರದ್ದು.
ನೀವು ನಂಬಲಿಕ್ಕಿಲ್ಲ,ಈತನಕ 150 ಕ್ಕೂ ಹೆಚ್ಚು ಮಕ್ಕಳಿಗೆ ಇವರು ಯಾವುದೇ ಪ್ರಚಾರ ಬಯಸದೇ ಉಚಿತ ಶಿಕ್ಷಣ ,ಬಟ್ಟೆ ಬರೆ,ಪುಸ್ತಕ ಒದಗಿಸಿದ್ದಾರೆ.ಅವರ ಮನೆಯವರ ಕಷ್ಟ ಆಲಿಸಿದ್ದಾರೆ.ಅವರ ಅನಾರೋಗ್ಯಕ್ಕೆ ಸಹಾಯ ಮಾಡುವ ಮೂಲಕ ಮಿಡಿದಿದ್ದಾರೆ.
Kshetra Samachara
31/10/2020 08:43 pm