ಉಡುಪಿ: ಉಡುಪಿ ಜಿಲ್ಲೆ ಅನೇಕ ಆಚಾರ-ವಿಚಾರಗಳನ್ನು ಒಳಗೊಂಡಂತಹ ಧಾರ್ಮಿಕ ಕ್ಷೇತ್ರವಾಗಿದೆ. ಅದೇ ರೀತಿ ತನ್ನ ಒಡಲೊಳಗೆ ಅನೇಕ ಆಚಾರ-ವಿಚಾರಗಳನ್ನು ಹೊಂದಿರುವಂತಹ ತಮ್ಮದೇಯಾದ ಸಂಪ್ರದಾಯವನ್ನು ಒಳಗೊಂಡಂತಹ ರಾಜ್ಯದ ಹಲವು ಜಿಲ್ಲೆಯ ಜನರಿಗೆ ಆಸರೆ ಕೂಡ ಆಗಿದೆ. ಉತ್ತರ ಕರ್ನಾಟಕ ಜಿಲ್ಲೆಯ ಹಲವು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ತಮ್ಮ ಭಕ್ತಿಯ ನೆಲೆಗಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಅನೇಕರು ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಅಂತದ್ರಲ್ಲಿ ಗದಗಿನ ಮೂಲದ ಅಯ್ಯಪ್ಪ ಇದೀಗ 25 ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ನೆಲೆಯೂರಿ ತನ್ನ ಜೀವನಕ್ಕೆ ಆಸರೆಯಾದ ಕುಲಕಸುಬನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಗದಗಿನ ಪುಟ್ಟರಾಜ ಗವಾಯಿ ಆಶ್ರಮದಲ್ಲಿ ಗುರುಗಳ ಶಿಷ್ಯರಾಗಿದ್ದು,ಅಯ್ಯಪ್ಪ ಉಡುಪಿ ಜಿಲ್ಲೆಯಲ್ಲಿ ನೆಲೆಯೂರಿ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಹೆಮ್ಮೆ ಇವರದಾಗಿದೆ . ಜಾನಪದ ಗೀತೆಗಳನ್ನು ಹರಿದಾಸರ ಕೀರ್ತನೆಗಳನ್ನು ಮನೆಮನೆಯಲ್ಲಿ ಹೇಳಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಈ ಕುಟುಂಬ.
ಇಂದು ಮಕ್ಕಳಿಗೆ ಈ ಹರಿದಾಸ ಕೀರ್ತನೆಯಿಂದ ವೇಷದಾರಿಯಾಗಿ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿವರ್ಷ ಮನೆಮನೆಗಳಿಗೆ ಹೋಗಿ ತಮ್ಮ ಹರಿದಾಸರ ಕೀರ್ತನೆಗಳನ್ನು ಅಲ್ಲಿ ಹೇಳಿ ಅವರು ಕೊಡುವ ಹಣವನ್ನು ಕಾಣಿಕೆ ರೂಪದಲ್ಲಿ ಸ್ವೀಕರಿಸಿ ನಂತರ ಅವರಿಗೆ ಮನೋಭಾವ ಕುಟುಂಬದ ವಂಶಪಾರಂಪರಿಕವಾಗಿ ನಡೆದುಬಂದಿದೆ.
ಇಂತಹ ವೇಷಧಾರಿಗಳ ತಂಡ ಉಡುಪಿ ಜಿಲ್ಲೆಯಲ್ಲಿ 50ರಿಂದ 60 ಜನ ವಾಸವಾಗಿದ್ದಾರೆ, ಬದುಕಿಗೊಂದು ಕಲೆ ಕಲೆಗೊಂದು ರೂಪ ರೂಪಕ್ಕೊಂದು ಧ್ವನಿಯಾಗಿ ಇವರ ಬದುಕು ಸಾಗುತ್ತಿದೆ, ಕರ್ನಾಟಕ ರಾಜ್ಯ ವಿವಿಧ ಭಾಷೆ ವಿವಿಧ ಆಚಾರ ವಿಚಾರಗಳನ್ನು ಒಳಗೊಂಡಿದೆ ಅದೇ ರೀತಿ ರಾಜ್ಯದ ಮೂಲೆ ಮೂಲೆಯಲ್ಲಿ ಜಾನಪದ ಶೈಲಿಯ ಅನೇಕ ಕಲೆಗಳು ಇಂದು ಜೀವಂತವಾಗಿದೆ ಎನ್ನುವುದಕ್ಕೆ ಇವರುಗಳು ಸಾಕ್ಷಿಯಾಗಿ ನಿಂತಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
03/12/2020 11:58 am