ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಮಾಜಸೇವಕರಿಂದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಹಾಗೂ ರಾಮದಾಸ್ ಪಾಲನ್ ಅವರು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಅಂತಿಮ ಗೌರವಗಳೊಂದಿಗೆ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮದಲ್ಲಿ ನಡೆಸಿದರು.

ಶೇಖರ (50), ರಮೇಶ (45 ), ರಾಜು (70 ), ವೀರಭದ್ರ (70) ಎಂಬ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃತಪಟ್ಟಿದ್ದರು. ವಾರೀಸುದಾರರ ಬರುವಿಕೆಗಾಗಿ ಅವರೆಲ್ಲರ ಶವಗಳನ್ನು ಆಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ಸಂಬಂಧಪಟ್ಟವರು ಸಂಪರ್ಕಿಸದೇ ಇರುವುದರಿಂದ ಇಂದು ಅಂತ್ಯಸಂಸ್ಕಾರ ನಡೆಸಲಾಯಿತು.

ಶವಸಂಸ್ಕಾರ ನಡೆಸಲು ವಿಷ್ಣು ಪ್ಲವರ್ ಸ್ಟಾಲ್ ನ ಮಾಲೀಕರು ಹೂವು ಉಚಿತವಾಗಿ ಒದಗಿಸಿದರು. ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿದರು. ಸಾಜಿ ಅಜ್ಛರಕಾಡು, ಮತ್ತು ತಾಯಿರ್ ಸಹಕರಿಸಿದರು. ಅಂದ ಹಾಗೆ ಮೊನ್ನೆಯಷ್ಟೇ ಜಿಲ್ಲಾ ನಾಗರಿಕ ಸಮಿತಿಯ ಸಮಾಜಸೇವಕರು ನೂರು ಅನಾಥರ ಶವ ಸಂಸ್ಕಾರ ಪೂರೈಸಿದ್ದರು. ಇಂದು ಒಂದೇ ದಿನ ಮತ್ತೆ ನಾಲ್ವರಿಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಈ ಸಹೃದಯರು ಮಾನವೀಯತೆ ಮೆರೆದಿದ್ದಾರೆ.

Edited By : Manjunath H D
Kshetra Samachara

Kshetra Samachara

16/11/2020 07:34 pm

Cinque Terre

23.72 K

Cinque Terre

8

ಸಂಬಂಧಿತ ಸುದ್ದಿ