ಕಾಪು: ಮನೆಯ ತೋಟದಲ್ಲೇ ಗೋಶಾಲೆ ನಿರ್ಮಿಸಿ ಸ್ವತಃ ಗೋವುಗಳ ಸಾಕಾಣಿಕೆ ಕೇಂದ್ರ ಪ್ರಾರಂಭಿಸುವ ಮೂಲಕ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಗೋವುಗಳ ಸಂರಕ್ಷಣೆಗೆ ಮಾದರಿಯಾಗಿದ್ದಾರೆ.
ಬೆಳಪು ಗ್ರಾಮದ ಪಣಿಯೂರಿನಲ್ಲಿರುವ ಡಾ.ದೇವಿಪ್ರಸಾದ್ ಶೆಟ್ಟಿಯವರ ನಿವಾಸದಲ್ಲಿ ಕಳೆದ ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ ನಂದಗೋಕುಲದಲ್ಲಿ ಪ್ರಸ್ತುತ ಸುಮಾರು 30 ವಿವಿಧ ದೇಶಿ ತಳಿಗಳಿವೆ.ಅದರೊಂದಿಗೆ ಕೃಷಿ ಚಟುವಟಿಕೆ,ವಿವಿಧ ಸಾಕು ಪ್ರಾಣಿಗಳು,ಪಕ್ಷಿಗಳ ಸುಂದರ ನೋಟ ಇಲ್ಲಿ ಕಾಣಬಹುದು.
ಈ ಬಗ್ಗೆ ಮಾತನಾಡಿದ ಡಾ.ದೇವಿ ಪ್ರಸಾದ್ ಶೆಟ್ಟಿ,ನಾವು ಗೋವುಗಳ ಸಂರಕ್ಷಣೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಗೋಶಾಲೆಯನ್ನು ನಿರ್ಮಿಸಿದ್ದೇವೆ.
ಗೋವೊಂದಕ್ಕೆ ಉತ್ತಮ ಆಹಾರಕ್ಕೆ ದಿನಕ್ಕೆ 300 ರಿಂದ 350 ರಷ್ಟು ಖರ್ಚು ತಗಲುತ್ತದೆ.ಅದರೊಂದಿಗೆ ಅದರ ಮೇಲ್ವಿಚಾರಕರು,ಸಾಕುವವರು ಸೇರಿದಂತೆ ಇತರೆ ಎಲ್ಲಾ ಖರ್ಚು ವೆಚ್ಚಗಳಿದ್ದರೂ ಕೂಡ ಗೋವು ಸಾಕಾಣಿಕೆಯಲ್ಲಿ ಮನಸ್ಸಿಗೆ ಸಂತೃಪ್ತಿ ಇದೆ.
ಕೇವಲ ಗೋವು ರಕ್ಷಣೆ ಬಗ್ಗೆ ಗಂಟೆ ಕಟ್ಟಲೆ ಭಾಷಣ ಮಾಡಿದರೆ ಸಾಲದು,ಸ್ವತಃ ಗೋವುಗಳನ್ನು ಸಾಕುವ ಮೂಲಕ ನಾವು ಮಾದರಿಯಾಗಬೇಕು.
ದೇಶಿ ಗೋವುಗಳ ಹಾಲು ಆರೋಗ್ಯಕ್ಕೆ ಅತ್ಯಂತ ಉತ್ತಮ.ಗೋವುಗಳ ಸಂರಕ್ಷಣೆಯೊಂದಿಗೆ ಲಾಭದಾಯಕ ಉದ್ದಿಮೆಯನ್ನೂ ನಡೆಸಬಹುದು.
ಗೋವುಗಳನ್ನು ಉತ್ತಮ ರೀತಿಯಲ್ಲಿ ಸಾಕುವುದರೊಂದಿಗೆ ಅವುಗಳ ಮುಖದಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ವರದಿ:ಪಬ್ಲಿಕ್ ನೆಕ್ಸ್ಟ್ ಶಫೀ ಉಚ್ಚಿಲ
Kshetra Samachara
30/01/2022 04:36 pm