ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತಮ್ಮ ಬಾವಿಯನ್ನೇ ಕಲರ್ ಕಲರ್ ಮೀನಿನ ಅಕ್ವೇರಿಯಂ ಆಗಿ ಮಾರ್ಪಾಡು ಮಾಡಿದ್ದಾರೆ ಈ ವ್ಯಕ್ತಿ!

ಉಡುಪಿ: ಅಕ್ವೇರಿಯಂನಲ್ಲಿ ವಿವಿಧ ಜಾತಿಯ ಮೀನುಗಳನ್ನು ಹಾಕಿ ಸಾಕುವುದು, ಮನೆಗಳಲ್ಲಿ ಅವುಗಳನ್ನಿಡುವುದು ಸಾಮಾನ್ಯ.ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ಬಾವಿಯನ್ನೇ ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾರೆ! ಹೌದು...ಈ ವ್ಯಕ್ತಿ ಯಾರು,ಏನಿದು ಅಕ್ವೇರಿಯಂ ಬಾವಿ? ಮುಂದೆ ಓದಿ.

ಮನಸ್ಸಿಗೆ ಮುದ ನೀಡುವ ವಿವಿಧ ಜಾತಿಯ ಮೀನುಗಳನ್ನು ಖರೀದಿ ಮಾಡಿ ಮನೆಯ ಅಕ್ವೇರಿಯಂಗಳಲ್ಲಿ ಸಾಕುವ ಪರಿಪಾಠ ಕೆಲವರಿಗಿದೆ. ಆದರೆ ಉಡುಪಿ ಜಿಲ್ಲೆಯ ಉದ್ಯಾವರ ನಿವಾಸಿ ಮಹಮ್ಮದ್ ರಫೀಕ್ ಸಬ್ಜನ್ ಡಿಫರೆಂಟ್ ವ್ಯಕ್ತಿ.ಇವರು ತಮ್ಮ ಬಾವಿಯನ್ನೇ ಅಕ್ವೇರಿಯಂ ಮಾಡಿದ್ದು,ಮನೆಯನ್ಬು ಜನಾಕರ್ಷಣೆಯ ಕೇಂದ್ರ ಬಿಂದು ಮಾಡಿದ್ದಾರೆ.

ಪ್ರಾರಂಭದಲ್ಲಿ ರಫೀಕ್ ತಮ್ಮ ಮನೆಯ ಅಕ್ವೇರಿಯಂನಲ್ಲಿ ಚಿಕ್ಕ ಮೀನನ್ನು ತಂದು ಹಾಕಲಾರಂಭಿಸಿದರು. ಮನೆಯವರಿಗೆ ಎಲ್ಲರಿಗೂ ಅಚ್ಚುಮೆಚ್ಚಿನ ಈ ಮೀನು ದೊಡ್ಡದಾಗಿ ಬೆಳೆದು ಅಕ್ವೇರಿಯಂ ಒಳಗೆ ಓಡಾಟಕ್ಕೆ ಕಷ್ಟವಾದಾಗ ಅದನ್ನು ತಮ್ಮ ಬಾವಿಗೆ ಹಾಕಿದ್ದಾರೆ. ಬಾವಿಯಲ್ಲಿ ಮೀನು ದೊಡ್ಡದಾಗಿ ಮರಿಗಳನ್ನು ಇಡಲಾರಂಭಿಸಿತು. ಇದನ್ನು ಕಂಡ ಮನೆಯವರು ಬೇರೆ ಬೇರೆ ಜಾತಿಯ ಮೀನುಗಳನ್ನು ಬಾವಿಯಲ್ಲಿ ತಂದು ಹಾಕಲಾರಂಭಿಸಿದರು.

ನೀವು ನಂಬಲಿಕ್ಕಿಲ್ಲ, ಈಗ ಸುಮಾರು 70 ಕ್ಕಿಂತಲೂ ಹೆಚ್ಚು ಮೀನು ಈ ಬಾವಿಯಲ್ಲಿದ್ದು,ಬಾವಿಯೇ ಅಕ್ವೇರಿಯಂ ಆಗಿ ಮಾರ್ಪಟ್ಟಿದೆ!

ಈ ಅಕ್ಚೇರಿಯಂ ಬಾವಿ ನೋಡಲು ಸ್ಥಳೀಯರು ಪ್ರತಿದಿನ ಇವರ ಮನೆಗೆ ಬರುತ್ತಾರೆ.

ಪಕ್ಷಿಗಳು, ಮೀನುಗಳು ಸಹಿತ ಯಾವುದೇ ಜೀವಿಗಳನ್ನು ಬಂಧನದಲ್ಲಿ ಇರಿಸುವುದು ಸರಿಯಲ್ಲ ಎಂಬ ಭಾವನೆ ಅವರದು. ಹೀಗಾಗಿ ಅಕ್ವೇರಿಯಮ್ ನಲ್ಲಿ ಹಾಕುವ ಬದಲು ತನ್ನ ಬಾವಿಯಲ್ಲಿ ಹಾಕಿ ಸಾಕುತ್ತಿದ್ದಾರೆ ಸಾಹೇಬರು.ಮೀನುಗಳು ಚಪ್ಪಾಳೆ ಹೊಡೆದ ಸಮಯದಲ್ಲಿ ಬಂದು ಇವರು ನೀಡಿದ ತಿಂಡಿಯನ್ನು ತಿಂದು ಬಾವಿಯ ಕೆಲ ಭಾಗಕ್ಕೆ ಸೇರಿಕೊಳ್ಳುತ್ತವೆ. ದಿನಾಲೂ ಇವುಗಳೊಂದಿಗೆ ಬೆರೆಯುವ ಇವರು ಪರಿಸರಪ್ರೇಮಿ ಹೌದು.ನಿಜಕ್ಕೂ ಇವರ ಜೀವನಪ್ರೀತಿ ಮೆಚ್ಚಲೇಬೇಕು.

Edited By : Nagesh Gaonkar
Kshetra Samachara

Kshetra Samachara

25/10/2020 02:35 pm

Cinque Terre

38.95 K

Cinque Terre

7

ಸಂಬಂಧಿತ ಸುದ್ದಿ