ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧ ಪರಿಕರಗಳ ಹಸ್ತಾಂತರ

ಕಾಪು: ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆ.ಎಂ.ಎಫ್ ವತಿಯಿಂದ ಕೊಡ ಮಾಡಲ್ಪಟ್ಟ ಐವತ್ತು ಸಾವಿರ ರೂಪಾಯಿ ಮೌಲ್ಯದ ಔಷಧಿ ಪರಿಕರಗಳನ್ನು ಹಸ್ತಾಂತರಿಸಲಾಯಿತು.

ಔಷಧಿ ಪರಿಕರಗಳನ್ನು ಹಸ್ತಾಂತರಿಸಿದ ಕೆ.ಎಂ.ಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾರತಮ್ಯ ರಹಿತ ಸೇವೆ ನೀಡಿರುವ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಗೆ ಮಾದರಿಯಾಗಿ ಮೂಡಿಬಂದಿದೆ. ಇಲ್ಲಿನ‌ ಸೇವೆಯನ್ನು ಗುರುತಿಸಿ, ಸಾರ್ವಜನಿಕರ ಸೇವೆಗೆ ಅವಶ್ಯಕತೆ ಇರುವ ಸವಲತ್ತುಗಳನ್ನು ನೀಡಿದ್ದೇವೆ. ಅಗತ್ಯವಿದ್ದಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡಲು ಬದ್ಧರಿದ್ದೇವೆ ಎಂದರು.

ಕಾಪು ತಾಲೂಕಿನ ಜನತೆಯ ಅನುಕೂಲಕ್ಕಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿಡ್ನಿ ಡಯಾಲಿಸಿಸ್ ಘಟಕ ಸ್ಥಾಪನೆಯ ಅತ್ಯಗತ್ಯವಾಗಿದ್ದು ಅದಕ್ಕೆ ಪೂರಕವಾಗಿ ಕೆಎಂಎಫ್ ಸಹಿತ ವಿವಿಧ ಸಂಘ ಸಂಸ್ಥೆಗಳ ಮೂಲಕವಾಗಿ ಸಹಕರಿಸುವುದಾಗಿ ಭರವಸೆ ನೀಡಿದರು. ಸ್ಪೂರ್ತಿ ದಿವಾಕರ ಶೆಟ್ಟಿ, ಗಿರಿಜಾ ಹೆಲ್ತ್ ಕೇರ್ ಸರ್ವೀಸಸ್‌ನ ಆಡಳಿತ ನಿರ್ದೇಶಕ ರವೀಂದ್ರ ಕೆ. ಶೆಟ್ಟಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

20/08/2022 05:41 pm

Cinque Terre

7.68 K

Cinque Terre

0