ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಮನೆ ಮನೆಗಳಲ್ಲಿ ಯೋಗ ಬೆಳಗಲಿ:ದೇಲಂಪಾಡಿ

ಮಂಗಳೂರು:ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21" ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಪೂರ್ವಭಾವಿ ಯೋಗ ತರಬೇತಿ ಶಿಬಿರ ಮಂಗಳೂರು ಹಂಪನಕಟ್ಟೆ ಸರ್ಕಾರಿ ಕಾಲೇಜಿನಲ್ಲಿ ಖ್ಯಾತ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಮತ್ತು ಯೋಗ ಶಿಕ್ಷಕಿ ಸುಮಾ ರವರ ಮಾರ್ಗದರ್ಶನದಲ್ಲಿ ನಡೆಯಿತು.

ಯೋಗ ಮನುಷ್ಯನ ಆರೋಗ್ಯಕ್ಕೆ ಅತೀ ಅವಶ್ಯಕ. ದೈಹಿಕ ಅರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಪಾಲಕೃಷ್ಣ ದೇಲಂಪಾಡಿ ಅವರು ಕರೆ ನೀಡಿದರು.

ದಿನದ 8 ಗಂಟೆಗಳ ಕಾಲ ನಿಂತುಕೊಂಡು ಒತ್ತಡದ ಕೆಲಸ ಮಾಡುವ ಗೃಹರಕ್ಷಕರಿಗೆ ಯೋಗ ಅತ್ಯಂತ ಅನಿವಾರ್ಯ ಎಂದರು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿದರು.

ಸುಮಾರು 25 ಮಂದಿ ಗೃಹರಕ್ಷಕರು ಈ ಶಿಬಿರದಲ್ಲಿ ಭಾಗವಹಿಸಿದರು.

Edited By : Manjunath H D
Kshetra Samachara

Kshetra Samachara

20/06/2022 07:08 pm

Cinque Terre

18.83 K

Cinque Terre

0

ಸಂಬಂಧಿತ ಸುದ್ದಿ