ಕಾರ್ಕಳ : ಕಳೆದ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯದಿಂದಾಗಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗದೇ ಸಾರ್ವಜನಿಕರು ಕಷ್ಟ ಪಡುತ್ತಿದ್ದಾರೆ.ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಕಾರ್ಕಳ ಪುರಸಭೆ ಕಛೇರಿಯಲ್ಲಿ ಧರಣಿ ನಡೆಸಿದರು.
ಈ ಕುರಿತು ಪುರಸಭಾ ಆಡಳಿತದ ಗಮನಕ್ಕೆ ತಂದಿದ್ದರೂ ಕನಿಷ್ಠ ಪಕ್ಷ ತಾತ್ಕಾಲಿಕ ನೆಲೆಯಲ್ಲಿ ಜನರೇಟರ್ ವ್ಯವಸ್ಥೆ ಮಾಡದೇ ಇದ್ದು, ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಊರಿನಲ್ಲಿ ಮಾರಿಪೂಜೆ ಆಚರಣೆಯಾಗುತ್ತಿದ್ದು, ಜನರು ನೀರಿಲ್ಲದೆ ಪರದಾಡುತ್ತಿರುವುದರಿಂದ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶುಭದ್ ರಾವ್, ಅಶ್ಬಕ್ ಅಹಮ್ಮದ್, ಪ್ರತಿಮಾ ರಾಣೆ, ರೆಹಮತ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
09/03/2022 08:32 pm