ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುತ್ತಕಾಡು: ಬೃಹತ್ ಉಚಿತ ವೈದ್ಯಕೀಯ ಶಿಬಿರ

ಮುಲ್ಕಿ: ಕಿನ್ನಿಗೋಳಿ ಲಯನ್ಸ್ ಕ್ಲಬ್ , ಗುತ್ತಗಾಡು ನಾಗರಿಕ ಹಿತರಕ್ಷಣಾ ಸಮಿತಿ, ಐಕಳ ಪಾಂಪೈ ಕಾಲೇಜಿನ ಎನ್ ಸಿಸಿ ಘಟಕ, ಎಸ್ ವೈ ಎಸ್ ಶಾಂತಿನಗರ ಗುತ್ತಕಾಡು ಶಾಖೆ, ಎಸ್ಎಸ್ಎಫ್ ಗುತ್ತಕಾಡು ಯೂನಿಟ್ ಹಾಗೂ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ವೈದ್ಯಕೀಯ ಶಿಬಿರ ಹಾಗೂ ಲಾಯಲ್ಟಿ ಕಾರ್ಡ್ ನೊಂದಾವಣೆ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕಿನ್ನಿಗೊಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಮಾತನಾಡಿ ಸಂಘಟನೆಗಳು ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದ ನಾಗರಿಕರ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದು ಶ್ಲಾಘನೀಯವಾಗಿದೆ ಎಂದರು.

ಗುತ್ತಕಾಡು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಶವ ದೇವಾಡಿಗ, ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಎಸ್ ವೈ ಎಸ್ ಸುರತ್ಕಲ್ ಘಟಕದ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ, ಪೋಂಪೈ ಎನ್ ಸಿಸಿ ಘಟಕದ ಅಧಿಕಾರಿ ಪ್ರವೀಣ್ ಕುಮಾರ್, ಮೂಕಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಅಬಕಾರಿ ಇಲಾಖೆಯ ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಟಿಎಚ್ ಮಯ್ಯದ್ದಿ, ಗುತ್ತಕಾಡು ಎಸ್ ವೈ ಎಸ್ ಕಟ್ಟಕದ ಅಧ್ಯಕ್ಷ ಬಿ ಮಹಮ್ಮದ್, ಗುತ್ತಕಾಡು ಮಸೀದಿಯ ಟಿ ಹನೀಫ, ಎಸ್ಎಸ್ಎಫ್ ಗುತ್ತಕಾಡು ಘಟಕದ ಅಧ್ಯಕ್ಷ ಹಸೈನಾರ್, ಸದರ್ನ್ ಸುಹೈಲ್ ಸಖಾಫಿ, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು

ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಕೀಲು ,ಕಣ್ಣಿನ ಕಿವಿ, ಮೂಗು ಮತ್ತು ಗಂಟಲು ಹಾಗೂ ಮಕ್ಕಳ ತಜ್ಞರು ಭಾಗವಹಿಸಿದ್ದರು. 150 ಮಂದಿ ಶಿಬಿರದ ಪ್ರಯೋಜನ ಆಸ್ಪತ್ರೆಯ ವಿತರಣೆ ನಡೆಯಿತು ಟಿಕೆಅಬ್ದುಲ್ ಖಾದರ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

20/12/2021 05:38 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ