ಉಡುಪಿ: ದೇಶಾದ್ಯಂತ ನೂರು ಕೋಟಿ ಲಸಿಕೆ ವಿತರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಲೂನು ಹಾರಿಸಿ ಸಂಭ್ರಮ ಆಚರಿಸಲಾಯಿತು.
ಡಿಎಚ್ ಒ ಕಚೇರಿ ಮುಂಭಾಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ನೂರು ಬಲೂನು ಹಾರಿಸಿ ಸಂಭ್ರಮಾಚರಣೆ ನಡೆಯಿತು.
ಸಿಇಒ ನವೀನ್ ಭಟ್, ಡಿಎಚ್ ಒ ಡಾ. ನಾಗಭೂಷಣ ಉಡುಪ ಕಾರ್ಯಕ್ರಮದಲ್ಲಿ ಭಾಗಿಯಾದರು.
"ದೇಶದಲ್ಲಿ ನೂರು ಕೋಟಿ ಲಸಿಕೆ ಬಹುದೊಡ್ಡ ಸಾಧನೆ. ಜಿಲ್ಲೆಯಲ್ಲಿ ಮೊದಲ ಡೋಸ್ ಶೇ. 92 ಪೂರೈಕೆಯಾಗಿದೆ.
ಎರಡನೇ ಡೋಸ್ ಶೇ. 50ರಷ್ಟು ನೀಡಲಾಗಿದೆ. ಮೂರನೇ ಅಲೆ ತಡೆಗಟ್ಟುವಿಕೆಗೆ ಎಲ್ಲ ಪ್ರಯತ್ನ ನಡೆಯುತ್ತಿದೆ" ಎಂದು
ಉಡುಪಿ ಜಿ.ಪಂ. ಸಿಇಒ ನವೀನ್ ಭಟ್ ಈ ಸಂದರ್ಭ ಹೇಳಿದರು.
Kshetra Samachara
22/10/2021 08:27 pm