ಕುಂದಾಪುರ : ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಭಾರತೀಯ ರೆಡ್ಕ್ರಾಸ್ ಸೊಸೈಟಿ ಚೇರ್ಮನ್ ಎಸ್ ಜಯಕರ ಶೆಟ್ಟಿ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು , ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ ಎಂದರು.
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನಿಲ್ ಬಿ ನಾಯ್ಕ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿದರು.
ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ ಇವರಿಗೆ ರಕ್ತದಾನ ಶಿಬಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ಮಂಜುನಾಥ ಕಾಂಚನ್, ಜೈ ಕುಂದಾಪ್ರ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಜಯರಾಜ್ ಪಡುಕೆರೆ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಗೌರವ ಸಲಹೆಗಾರ ರವೀಂದ್ರ ರಟ್ಟಾಡಿ, ಮೊಗವೀರ ಮಹಾಜನ ಸಂಘ ಶಿವಮೊಗ್ಗ ಉಪಾಧ್ಯಕ್ಷ ರಾಮ ಕುಂದರ್ ಮೊಗಬೆಟ್ಟು, ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲೆ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ಸತೀಶ್ ಎಂ ನಾಯ್ಕ್, ಜೇಸಿಐ ವಲಯ 15ರ ವಲಯ ಸಂಯೋಜಕ ಅಶೋಕ್ ತೆಕ್ಕಟ್ಟೆ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ನಿಕಟಪೂರ್ವಾಧ್ಯಕ್ಷ ರವೀಶ್ ಎಸ್ ಕೊರವಡಿ ಉಪಸ್ಥಿತರಿದ್ದರು.
Kshetra Samachara
21/09/2021 07:04 pm