ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಲಸಿಕೆ ಬಗ್ಗೆ "ಫೋನ್ ಇನ್ "ಮೂಲಕ ಜನರಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಲಸಿಕೆಯ ಲಭ್ಯತೆ ,ನಾಳೆ ನಡೆಯಲಿರುವ ಲಸಿಕೆ ಮೇಳ ಮತ್ತು ಲಸಿಕೆ ತೆಗೆದುಕೊಳ್ಳುವ ಬಗ್ಗೆ ಜನರಲ್ಲಿ ಇರುವ ಗೊಂದಲ ನಿವಾರಣೆಗಾಗಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಉತ್ತರ ನೀಡಿದರು.ಮುಖ್ಯವಾಗಿ ಮೊದಲ ಡೋಸ್ ಪಡೆದು ಅವಧಿ ಮುಗಿದರೂ ಎರಡನೇ ಡೋಸ್ ಸಿಗದವರು ,ನಾಳೆ ನಡೆಯಲಿರುವ ಲಸಿಕೆ ಮೇಳ ,ಲಸಿಕೆ ಕೇಂದ್ರಗಳ ಮಾಹಿತಿ ,ಹೃದಯ ಸಮಸ್ಯೆ ಮತ್ತಿತರ ಸಮಸ್ಯೆಗಳಿರುವವರು ಲಸಿಕೆ ಪಡೆಯಬಹುದೇ ಬೇಡವೇ ಎಂಬ ಗೊಂದಲಗಳಿರುವ ಹಲವು ಜನರು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ವಿಚಾರಿಸಿದರು.

ಇವರಿಗೆ ಡಿಸಿ ಸಮಾಧಾನದಿಂದ ಉತ್ತರ ನೀಡುವ ಮೂಲಕ ಗೊಂದಲ ನಿವಾರಿಸಿದರು.ನಾಳೆಯ ಲಸಿಕೆ ಮೇಳದಲ್ಲಿ ಎಂಬತ್ತು ಸಾವಿರ ಡೋಸ್ ಲಸಿಕೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

Edited By : Shivu K
Kshetra Samachara

Kshetra Samachara

16/09/2021 01:04 pm

Cinque Terre

17.3 K

Cinque Terre

0