ಮಂಗಳೂರು:ನಿಫಾ ಸೋಂಕು ಇದೆ ಎಂಬ ಶಂಕೆಯಲ್ಲಿ ಗೋವಾ ಮೂಲದ ವ್ಯಕ್ತಿಯೊಬ್ಬರು ಮಂಗಳೂರಲ್ಲಿ ಪರೀಕ್ಷೆಗೆ ಮಾಡಿಕೊಂಡ ಘಟನೆ ನಡೆದಿದೆ. ತಪಾಸಣೆಗೊಳಪಟ್ಟಿರುವ ವ್ಯಕ್ತಿ ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖರಾಗಿದ್ದರು.
ಇವರು ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ ಅಲ್ಲಿಂದ ನೇರವಾಗಿ ಮಂಗಳೂರಿಗೆ ಬಂದಿದ್ದಾರೆ. ಇವರ ಮಾದರಿ ಪಡೆದಿರುವ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳಿಸಿದ್ದು, ಸೆಪ್ಟೆಂಬರ್ 15ರೊಳಗೆ ವರದಿ ಬರಲಿದೆ. ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ಈ ವ್ಯಕ್ತಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಸ್ವಇಚ್ಛೆಯಿಂದ ತಪಾಸಣೆಗೊಳಪಟ್ಟಿದ್ದಾರೆ. ಅವರಲ್ಲಿ ರೋಗದ ಯಾವುದೇ ಗುಣಲಕ್ಷಣ ಇರಲಿಲ್ಲ.ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದ ಜಿಲ್ಲಾಡಳಿತ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಕಾರವಾರದ ವ್ಯಕ್ತಿ ಗೋವಾದಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ಕೆಲಸ ನಿಫಾ ಸ್ಯಾಂಪಲ್ ಟೆಸ್ಟ್ ಕೂಡ ಮಾಡಲಾಗುತ್ತಿತ್ತು. ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದಾರೆ.
ನಿಫಾ ಸೋಂಕಿನ ಶಂಕೆ ಇಲ್ಲದಿದ್ರು ನಿರ್ಲಕ್ಷ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಟೆಸ್ಟ್ ಗೆ ಕಳುಹಿಸಿದ್ದೇವೆ. ಪುಣೆಯಿಂದ ರಿಪೋರ್ಟ್ ಕೂಡ ಬೇಗ ತರಿಸುವ ವ್ಯವಸ್ಥೆ ಆಗಿದೆ. ಅವನ ಮನೆಯವರನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ ಎಂದರು. ಇನ್ನು
ಅವನು ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಅಲರ್ಟ್ ಮಾಡಲಾಗಿದೆ ಅಂದರು.
Kshetra Samachara
14/09/2021 12:53 pm