ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ತುಳುಕೂಟದಿಂದ ತುಳುನಾಡ ಸಂಪ್ರದಾಯದ ಪಾಲೆ ಮರದ ತೊಗಟೆ ಕಷಾಯ ವಿತರಣೆ

ಬಂಟ್ವಾಳ: ಆಟಿ (ಆಷಾಢ) ಅಮಾವಾಸ್ಯೆ ಹಿನ್ನೆಲೆಯಲ್ಲಿ ತುಳುಕೂಟ ಬಂಟ್ವಾಳದಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಹಯೋಗದಲ್ಲಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಸುಕಿನ ವೇಳೆ ಸಾರ್ವಜನಿಕರಿಗೆ ಪಾಲೆ (ಹಾಳೆ) ಮರದ ಕೆತ್ತೆ (ತೊಗಟೆ) ಕಷಾಯವನ್ನು ವಿತರಿಸಲಾಯಿತು.

ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಈ ಕಷಾಯವನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು ಎಂಬ ನಂಬಿಕೆ ಇರುವ ಕಾರಣ ಕರಾವಳಿಯಲ್ಲಿ ಇದನ್ನು ಸೇವಿಸುವ ಪರಿಪಾಠ ಇದೆ. ತುಳುಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಕಷಾಯ ವಿತರಣೆ ಮಾಡಿ ಚಾಲನೆ ನೀಡಿದರು.

ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ್ ಜೈನ್, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ಕಾರ್ಯದರ್ಶಿ ಶಿವಶಂಕರ್ ಎನ್, ಪ್ರಮುಖರಾದ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ರಮೇಶ ನಾಯಕ್ ರಾಯಿ, ಎಚ್ಕೆ ನಯನಾಡು, ಶೇಷಪ್ಪ ಮಾಸ್ಟರ್, ನಾರಾಯಣ ಸಿ. ಪೆರ್ನೆ, ಸುಕುಮಾರ್ ಬಂಟ್ವಾಳ, ಪ್ರಕಾಶ ಶೆಟ್ಟಿ ತುಂಬೆ, ಸತೀಶ ಕುಮಾರ ಕಾರ್ತಿಕ್, ಹರೀಶ್ ಬಿ.ಸಿ.ರೋಡ್, ದಾಮೊದರ್ ಏರ್ಯ, ಜಯಾನಂದ ಪೆರಾಜೆ, ಜತಿನ್ ಮೊದಲಾದವರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

08/08/2021 11:25 am

Cinque Terre

10.36 K

Cinque Terre

0

ಸಂಬಂಧಿತ ಸುದ್ದಿ