ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: "ರಕ್ತದಾನದ ಮೂಲಕ ರಕ್ಷಣೆ ಸಂಘಟನೆಗಳ ಕಾರ್ಯ ಶ್ಲಾಘನೀಯ"

ಮುಲ್ಕಿ: ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ) ಹಾಗೂ ಯೆನಪೋಯ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಾರ್ನಾಡು ಮಸ್ಜಿದ್ ನ್ನೂರು ಜುಮ್ಮಾ ಮಸೀದಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮುಲ್ಕಿ ಶಾಪಿ ಜುಮ್ಮಾ ಮಸೀದಿಯ ಖತೀಬರಾದ ಎಸ್.ಬಿ.ದಾರಿಮಿ ಮಾತನಾಡಿ ರಕ್ತದಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜೀವ ರಕ್ಷಣೆ ಕಾರ್ಯ ಮಾಡುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಲಿಯಾಕತ್ ಆಲಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮುಲ್ಕಿ ನ. ಪಂ.ಸದಸ್ಯರಾದ ಪುತ್ತು ಬಾವ, ಹಕೀಮ್ ಕಾರ್ನಾಡ್, ಕಾರ್ನಾಡು ಮಸೀದಿಯ ಖತೀಬರಾದ ಇಸ್ಮಾಯಿಲ್ ದಾರಿಮಿ, ಮುಲ್ಕಿ ಸುಸ್ರತುಲ್ ಮಸಾಕಿನ್ ಅಧ್ಯಕ್ಷರಾದ ಅಮಾನುಲ್ಲಾ , ಕಾರ್ನಾಡು ಮಸೀದಿಯ ಕಲಂದರ್ ಶಾಫಿ,ಪಿಎಫ್ಐ ಜಿಲ್ಲಾ ಸಮಿತಿಯ ಸದಸ್ಯರಾದ ಏಕೆ ಅಬೂಬಕ್ಕರ್, ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷರಾದ ಎಂ.ಕೆ. ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೊರೊನ ವಾರಿಯರ್ಸ್ ಕಾರ್ನಾಡಿನ ವೈದ್ಯ ಡಾ.ಶರತ್ ಶೆಟ್ಟಿ ರವರನ್ನು ಗೌರವಿಸಲಾಯಿತು.ಬಳಿಕ ರಕ್ತದಾನ ಶಿಬಿರ ನಡೆಯಿತು. ತೌಸಿಫ್ ಕಾರ್ಯಕ್ರಮ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

01/08/2021 04:26 pm

Cinque Terre

14.07 K

Cinque Terre

1

ಸಂಬಂಧಿತ ಸುದ್ದಿ