ಉಡುಪಿ: ಉಡುಪಿಯಲ್ಲಿ ಇದೇ ಜ. 17 ಮತ್ತು 18ರಂದು ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯಲಿದೆ. ಈ ಸಂಬಂಧ ಎಲ್ಲ ಸಿದ್ಧತೆ ನಡೆಯುತ್ತಿವೆ. ಆದರೆ, 2 ವರ್ಷಕ್ಕೊಮ್ಮೆ ನಡೆಯುವ ನಾಡಹಬ್ಬ ಪರ್ಯಾಯಕ್ಕೆ ಈ ಬಾರಿ ಕೋವಿಡ್ ನಿರ್ಬಂಧಗಳಿವೆ. ಹೀಗಾಗಿ ಪರ್ಯಾಯ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಆದರೂ ಭಕ್ತರು ಪರ್ಯಾಯ ಮಹೋತ್ಸವದ ಮೆರವಣಿಗೆ ಮತ್ತು ಉತ್ಸವಕ್ಕೆ ಸರಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು ಪಾದಯಾತ್ರೆ, rally ಮೂಲಕ ನಿಯಮಾವಳಿ ಉಲ್ಲಂಘಿಸುತ್ತಿದ್ದಾರೆ. ಆದರೆ, ಧಾರ್ಮಿಕ ಉತ್ಸವ ಪರ್ಯಾಯಕ್ಕೆ ಸರಕಾರ ಅನುಮತಿ ನೀಡಿ, ವಿನಾಯಿತಿ ನೀಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
PublicNext
12/01/2022 12:49 pm