ಉಡುಪಿ: ಪದೇಪದೇ ನೈಟ್ ಕರ್ಪ್ಯೂ ಮತ್ತು ವೀಕೆಂಡ್ ಕರ್ಫ್ಯೂ ಹೇರಿ ಸರಕಾರ ನಮಗೆ ತೊಂದರೆ ಕೊಡುತ್ತಿದೆ. ಇದೀಗ ಒಮಿಕ್ರಾನ್ ಹೆಸರಲ್ಲಿ ವರ್ತಕರಾದ ನಮ್ಮನ್ನು ಸರಕಾರ ಗುರಿ ಮಾಡುತ್ತಿದೆ. ಕೊರೋನಾ ನಿಯಮಗಳನ್ನು ನಾವೆಲ್ಲ ಪಾಲಿಸುತ್ತಿದ್ದೇವೆ. ಕರ್ಫ್ಯೂ ಮತ್ತು ಲಾಕ್ಡೌನ್ ಹೆಸರಲ್ಲಿ ಅಂಗಡಿ-ಮುಂಗಟ್ಟುಗಳು ಮತ್ತು ಹೊಟೇಲುಗಳನ್ನು ಮುಚ್ಚುವ ಬದಲು ಸರಕಾರ ಬೇರೆ ರೀತಿಯ ನಿರ್ಬಂಧಗಳನ್ನು ಹಾಕಬೇಕು. ಅದು ಬಿಟ್ಟು ಪ್ರತಿ ಬಾರಿ ಅಂಗಡಿ ಹೋಟೆಲ್ ಲಾಡ್ಜು ಗಳನ್ನು ಮುಚ್ಚುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.ಈಗಾಗಲೇ ಎರಡು ಬಾರಿ ಲಾಕ್ ಡೌನ್ ನಿಂದಾಗಿ ನಾವು ಸಂಪೂರ್ಣ ಸೋತಿದ್ದೇವೆ. ಇದೀಗ ವ್ಯಾಪಾರ ಚಿಗಿತುಕೊಳ್ಳುವ ಸಂದರ್ಭದಲ್ಲಿ ಸರಕಾರ ಮತ್ತೊಮ್ಮೆ ವೀಕೆಂಡ್ ಕರ್ಪ್ಯೂ ಮುಂದುವರಿಸಿರುವುದು ಅನ್ಯಾಯ. ವರ್ತಕರನ್ನು ಕೂಡ ಬದುಕಲು ಬಿಡಿ ಎಂದು ವರ್ತಕರ ಹಿತರಕ್ಷಣಾ ವೇದಿಕೆ ಸರಕಾರವನ್ನು ಆಗ್ರಹಿಸಿದೆ.
PublicNext
13/01/2022 03:45 pm