ಮಂಗಳೂರು : ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ಬಾಲಕಿಯೋರ್ವಳು ತನ್ನ ಕೇಶ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ಸಮೀಪದ ಪಡುಮಾರ್ನಾಡಿನಲ್ಲಿ ನಡೆದಿದೆ.
9 ವರ್ಷದ ತಾನಿಯಾ ಎಂಬ ಬಾಲಕಿ ತನ್ನ 16 ಇಂಚಿನಷ್ಟು ಉದ್ದದ ಕೂದಲನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ದಾನ ಮಾಡಿದ್ದಾಳೆ. ಪಡುಮಾರ್ನಾಡಿನ ಸೇವಾ ಮಾಣಿಕ್ಯವೆಂದು ಬಿರುದು ಪಡೆದಿರುವ ಲೋಹಿತ್ ಎಸ್-ಟೆಸ್ಲಿನಾ ದಂಪತಿಯ ಪುತ್ರಿಯಾದ ತಾನಿಯ ಎಸ್ , ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರ ಕ್ಯಾನ್ಸರ್ ಪೀಡಿತರಿಗಾಗಿ ಹಮ್ಮಿಕೊಂಡಿರುವ ಕೇಶ ದಾನ ಮಹಾಯೋಜನೆಗೆ ತನ್ನ ಕೂದಲನ್ನು ದಾನ ಮಾಡಿದ್ದಾಳೆ.
ಇತ್ತೀಚೆಗಷ್ಟೇ ತಾನಿಯಾ ಚಿಕ್ಕಮ್ಮ ಕ್ಯಾರಲ್ ಎಂಬುವವರು ಕ್ಯಾನ್ಸರ್ ಪೀತರಿಗೆ ತನ್ನ ಕೂದಲನ್ನು ದಾನ ಮಾಡಿದ್ದರು. ಈ ಬಗ್ಗೆ ತಾನಿಯಾ ಆಕೆಯ ಬಳಿ ವಿಚಾರಿಸಿದ್ದಾಳೆ. ಆಗ ಆಕೆಯ ಚಿಕ್ಕಮ್ಮ ಕ್ಯಾನ್ಸರ್ ಪೀಡಿತರ ಬಗ್ಗೆ ತಾನಿಯಾಗೆ ಮಾಹಿತಿ ನೀಡಿದ್ದಾರೆ. ಬಳಿಕ ತಾನೂ ತನ್ನ ಕೂದಲನ್ನು ದಾನ ಮಾಡುವುದಾಗಿ ತಿಳಿಸಿದ್ದು ಮಗಳ ಮಾನವೀಯ ಕಾಳಜಿಗೆ ಪೋಷಕರು ಸಮ್ಮತಿ ಸೂಚಿಸಿದ ಬಳಿಕ ತಾನಿಯಾ ಕೂದಲು ದಾನ ಮಾಡಿದ್ದಾಳೆ.
PublicNext
04/05/2022 09:07 pm