ಉಡುಪಿ: ಮೈಸೂರಿನಿಂದ ಬಂದಿದ್ದ ಸ್ವಾಮೀಜಿಯೊಬ್ಬರು ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಅಸ್ವಸ್ಥರಾದ ಘಟನೆ ನಡೆದಿದೆ. ತಕ್ಷಣ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಲಾಯಿತು. ಸ್ವಾಮೀಜಿಯವರು ಕುಸಿದು ಬಿದ್ದ ಪರಿಣಾಮ ಒಂದು ಕೈ ಸ್ವಾಧೀನ ಕಳೆದುಕೊಂಡಿದೆ.
ಸ್ವಾಮೀಜಿಯವರು ಹೆಸರು ಶ್ರೀ ಸಿದ್ಧರಾಜು ಸ್ವಾಮೀಜಿ, (54) ಎಂದು ತಿಳಿದುಬಂದಿದೆ. ಮೈಸೂರಿನ ಮುನೇಶ್ವರ ನಗರದ ನಿವಾಸಿ ಎಂದು ಹೇಳಿಕೊಂಡಿದ್ದಾರೆ. ವಾರಸುದಾರರು ಅಥವ ಶಿಷ್ಯರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಮನವಿ ಮಾಡಿದ್ದಾರೆ.
PublicNext
10/03/2022 05:25 pm