ಕುಂದಾಪುರ: ಇಲ್ಲಿನ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಏಕಾಏಕಿ 20 ಮಂದಿಯನ್ನು ವರ್ಗಾಯಿಸಿದ್ದು, ಕುಂದಾಪುರದ ಹೆರಿಗೆ ಆಸ್ಪತ್ರೆಗೆ ಸಿಬ್ಬಂದಿಗಳ ಕೊರತೆ ಉಂಟಾಗಿದ್ದು, ಉಡುಪಿ ಹಾಜಿ ಅಬ್ದುಲ್ಲಾ ಮಕ್ಕಳ ಆಸ್ಪತ್ರೆಯನ್ನು ಬಿ. ಆರ್ ಶೆಟ್ಟಿ ವಹಿಸಿಕೊಂಡಾಗ 20 ಸಿಬ್ಬಂದಿಗಳನ್ನು ಕುಂದಾಪುರಕ್ಕೆ ಕಳುಹಿಸಿ ಕೊಟ್ಟಿದ್ದರು.
ಇದೀಗ ಉಡುಪಿ ಹಾಜಿ ಅಬ್ದುಲಾ ಆಸ್ಪತ್ರೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡ ಕಾರಣ ಮತ್ತೆ ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಂಡಿದ್ದಾರೆ. ಸರ್ಕಾರದ ಆದೇಶವಿರುವ ಕಾರಣ ನಾವು 20 ಸಿಬ್ಬಂದಿಗಳನ್ನು ವರ್ಗಾಯಿಸಿದ್ದೇವೆ ಎಂದು ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
Kshetra Samachara
13/05/2022 04:04 pm