ಉಡುಪಿ: ಉಡುಪಿ ಜಿಲ್ಲೆ ಪ್ರಥಮ ಡೋಸ್ ಲಸಿಕೆ ನೀಡುವಲ್ಲಿ ಶೇ.100 ಸಾಧನೆ ಮಾಡಿದೆ. ಇನ್ನು ಎರಡನೇ ಡೋಸ್ ಲಸಿಕೆಯನ್ನು ಡಿಸೆಂಬರ್ ಅಂತ್ಯದೊಳಗೆ ಶೇ.100 ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಷ್ಕೃತ 9,01,568 ಗುರಿಯಲ್ಲಿ 9,08,618 ಜನರಿಗೆ ಮೊದಲ ಡೋಸ್ ನೀಡಿದ್ದು ಇವರಲ್ಲಿ ಈಗಾಗಲೇ 4,38,324 (ಶೇ.48.6) ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಮೊದಲ ಡೋಸ್ ಸಾಧನೆಗೆ ಆರೋಗ್ಯ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಇನ್ನು ಲಸಿಕೆ ವೇಸ್ಟೇಜ್ ಆಗದಂತೆ ನೋಡಿಕೊಳ್ಳುವಲ್ಲೂ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಶೇ.50ಕ್ಕಿಂತ ಹೆಚ್ಚು ವಯಲ್ ಗಳಲ್ಲಿ ಲಭ್ಯವಿದ್ದ ಹೆಚ್ಚುವರಿ 11ನೇ ಡೋಸ್ ಅನ್ನು ವಿತರಿಸಲಾಗಿದೆ. ಇದುವರೆಗೆ ಜಿಲ್ಲೆಗೆ 12,30,700 ಡೋಸ್ ಲಸಿಕೆ ಸರಬರಾಜು ಆಗಿದ್ದು ಈಗ 69,640 ಡೋಸ್ ಲಸಿಕೆ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮಾಹಿತಿ ನೀಡಿದ್ದಾರೆ.
Kshetra Samachara
08/10/2021 11:53 am