ಉಡುಪಿ: ಜಿಲ್ಲೆಯಲ್ಲಿ ಪ್ರೈಮರಿಯಿಂದ ಹೈಯರ್ ಎಜುಕೇಶನ್ ವರೆಗಿನ ಒಟ್ಟು 862 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿರುವುದಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ನಾಗರತ್ನ ಮಾಹಿತಿ ನೀಡಿದ್ದಾರೆ.
862 ವಿದ್ಯಾರ್ಥಿಗಳಲ್ಲಿ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ ,ಡಿಗ್ರಿ ಕಾಲೇಜು, ಹೈಸ್ಕೂಲ್ ಮತ್ತು ಪ್ರೈಮರಿ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.21 ರಿಂದ 25 ವಯೋಮಾನದ 375 ,15 ರಿಂದ 20 ವರ್ಷದೊಳಗಿನ 375 ಮಕ್ಕಳಿಗೆ ಮತ್ತು 5 ರಿಂದ 15 ವರ್ಷದೊಳಗಿನ 183 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಮಣಿಪಾಲ ಯುನಿವರ್ಸಿಟಿಯ ಎಂಐಟಿ ಯನ್ನು ಕಂಟೈನ್ ನೆಂಟ್ ಝೋನ್ ಮಾಡಲಾಗಿದೆ.ಸೋಂಕಿತ ಹೈಸ್ಕೂಲ್ ಮತ್ತು ಪ್ರೈಮರಿ ವಿದ್ಯಾರ್ಥಿಗಳನ್ನು ಹೋಮ್ ಐಸೋಲೇಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಜನವರಿ 1ರಿಂದ ವಿದ್ಯಾರ್ಥಿಗಳ ಟೆಸ್ಟಿಂಟ್ ಪ್ರಮಾಣ ಹೆಚ್ಚಿಸಲಾಗಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
13/01/2022 09:36 am