ಉಡುಪಿ: ಕೊರೋನಾ ಸಾಂಕ್ರಾಮಿಕ ನಂತರ ರಾಜ್ಯಾದ್ಯಂತ ಕಾಲೇಜುಗಳು ಓಪನ್ ಆಗಿದ್ದು ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 9072 ವಿದ್ಯಾರ್ಥಿಗಳ ಪೈಕಿ ಕೇವಲ 300 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದಾರೆ.
ಈ ಪೈಕಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳದ್ದೇ ಸಿಂಹಪಾಲು. ಪದವಿಯ ಅಂತಿಮ ವರ್ಷದ ತರಗತಿಗಳು ಆರಂಭವಾಗಿ ಐದು ದಿನ ಕಳೆದಿವೆ. ಕೊರೋನಾ ಟೆಸ್ಟ್ ಮಾಡಿ ತರಗತಿಗಳನ್ನು ಆರಂಭ ಮಾಡಲಾಗಿದೆ. ಶಿಕ್ಷಣದಲ್ಲಿ ಸದಾ ಮುಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ಜಿಲ್ಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತರಗತಿಯಲ್ಲಿ ವಿದ್ಯಾರ್ಥಿಗಳು ಇಲ್ಲದೆ ಕ್ಲಾಸ್ ರೂಂ ಬಿಕೋ ಅನ್ನುತ್ತಿದೆ. ಜಿಲ್ಲೆಯಲ್ಲಿ 55 ಕಾಲೇಜು ಇದ್ದರೂ ಹಾಜರಾತಿ ಕೇವಲ 300. ಸುಮಾರು ಆರು ಸಾವಿರ ವಿದ್ಯಾರ್ಥಿಗಳಿಗೆ ಕೊರೋನ ಟೆಸ್ಟ್ ನಡೆದಿದ್ದು ಇಂದು ನಾಳೆ ಟೆಸ್ಟ್ ರಿಪೋರ್ಟ್ ಕೈಸೇರಲಿದೆ.
Kshetra Samachara
21/11/2020 03:23 pm