ಕಾರ್ಕಳ: ರಕ್ತದಾನ ಅತ್ಯಂತ ಶ್ರೇಷ್ಠ ದಾನ, ಹಣದಿಂದ ಏನು ಬೇಕಾದರೂ ಸಿಗಬಹುದು ಆದರೆ ತುರ್ತು ಸಂದರ್ಭದಲ್ಲಿ ರಕ್ತ ಬೇಕಾದಾಗ ಸಿಗಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡಬೇಕು, ಸದೃಢ ಆರೋಗ್ಯಕ್ಕೆ ರಕ್ತದಾನ ಅಗತ್ಯವಿದೆ ಎಂದು ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.
ಇನ್ನು ಮುನಿಯಾಲು ಪದ್ಮಾವತಿ ಅವರು ಕಲಾಮಂದಿರದಲ್ಲಿ ಭಾನುವಾರ ಮರಾಠಿ ಸಮಾಜ ಸೇವಾ ಸಂಘ ಅಜೆಕಾರು ವಲಯ, ಜೇಸಿಐ ಹೆಬ್ರಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ಇತರೇ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸ್ಥಾಪಕಾಧ್ಯಕ್ಷ ಸತೀಶ್ ಸಾಲ್ಯಾನ್ ,ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಕಡಂಬ, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗದ ಡಾ.ಅಜಿತ್ ,ಹಿಂಜಾವೇ ಅಜೆಕಾರು ವಲಯ ಅಧ್ಯಕ್ಷ ಸತೀಶ್ ಹೆಗ್ಡೆ ಪುಲ್ಲಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಜೆಕಾರು ವಲಯದ ಸೇವಾ ವಿಜಯಾ , ಹೆಬ್ರಿ ರೋಟರಿ ಕ್ಲಬ್ ಅಧ್ಯಕ್ಷ ರೂಪೇಶ್ ನಾಯ್ಕ್, ಸಂಗಮ್ ಫ್ರೆಂಡ್ಸ್ ಅಧ್ಯಕ್ಷ ಶೇಖರ ನಾಯ್ಕ್ , ಶಿವಾಜಿ ಅಭಿಮಾನಿ ಬಳಗ ಶಶಿಕಾಂತ್ ನಾಯ್ಕ್, ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ,ಶ್ರೀಧರ್ ಪೈ, ಅಜೆಕಾರು ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಅಮೀನ್,ರಾಜೇಶ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.
Kshetra Samachara
14/08/2022 09:55 pm