ಶಿರೂರು: ಹಲವು ಕೊರೊನಾ ಪೀಡಿತರ ಅಂತ್ಯ ಸಂಸ್ಕಾರ ಮಾಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಶಿರೂರು ವಲಯ ವತಿಯಿಂದ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಕ್ರಿಯೆಯನ್ನು ರಜ್ಜಬ್ ಬುಡ್ಡಾ ಅವರ ನೇತೃತ್ವದಲ್ಲಿ ನಡೆಸುವ ಮೂಲಕ ಮಾನವೀಯತೆ ತೋರಿದೆ.
ಈ ಸಂದರ್ಭ ಮಣೆಗಾರ್ ಇಸಾಕ್, ಬುಡ್ಡು ಅಬ್ದುಲ್ ಗನಿ, ಝುಲ್ಫಕಾರ್,ಶಾಕೀರ್ ಬುಡ್ಡು, ಎಸ್ಡಿಪಿಐ ಪಂಚಾಯತ್ ಸದಸ್ಯ ಅಕ್ಬರ್ ಆದಮ್ ಮತ್ತು ಶಿರೂರು ಎಸ್ಡಿಪಿಐ ಪಂಚಾಯತ್ ಸಮಿತಿ ಅಧ್ಯಕ್ಷ ಶೋಯೆಬ್ ಅರೆಹೂಳೆ ಉಪಸ್ಥಿತರಿದ್ದರು.
Kshetra Samachara
18/10/2020 01:35 pm