ಮಂಗಳೂರು : ಜಿಲ್ಲೆಯಲ್ಲಿಂದು 17 ಜನರಲ್ಲಿ ಹೆಮ್ಮಾರಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಒಟ್ಟು ಸೋಂಕಿತ ಸಂಖ್ಯೆ 115633 ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿನಿಂದ 17 ಜನ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಆ ಮೂಲಕ ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 113813 ಕ್ಕೆ ಏರಿಕೆಯಾಗಿದೆ. ಇನ್ನು ಡೆಡ್ಲಿ ಸೋಂಕಿನಿಂದ ಇಂದು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸಾವಿನ ಸಂಖ್ಯೆ 1683 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ130 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿಂದು 03 ಮಂದಿಗೆ ಅಂಟಿದ ಸೋಂಕು
ಉಡುಪಿ: ಉಡುಪಿ ಜಿಲ್ಲೆಯಲ್ಲಿಂದು 03 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 76781 ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿನಿಂದ 05 ಜನ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಆ ಮೂಲಕ ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 76244 ಕ್ಕೆ ಏರಿಕೆಯಾಗಿದೆ.
ಇನ್ನು ಸೋಂಕಿನಿಂದ ಇಂದು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸಾವಿನ ಸಂಖ್ಯೆ 488 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 49 ಸಕ್ರಿಯ ಪ್ರಕರಣಗಳಿವೆ.
Kshetra Samachara
11/11/2021 07:36 pm