ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಲಸಿಕೆ ಕೊರತೆ ಹಿನ್ನೆಲೆ: ಕೇಂದ್ರಗಳಲ್ಲಿ ರಶ್ !

ಉಡುಪಿ: ಕಳೆದ ಕೆಲವು ದಿನಗಳಿಂದ ಉಡುಪಿಯಲ್ಲಿ ಲಸಿಕೆ ಅಭಾವ ತಲೆದೋರಿತ್ತು.ಮೊದಲ ಬಾರಿಗೆ ಲಸಿಕೆ ಪಡೆಯಬಯಸುವವರಿಗೆ ಮತ್ತು ಮೊದಲ ಡೋಸ್ ಪಡೆದು ಎರಡನೇ ಡೋಸ್ ನ ಅವಧಿ ಮುಗಿದರೂ ಲಸಿಕೆ ಲಭ್ಯ ಇರಲಿಲ್ಲ.

ಅಂದಾಜು ಜಿಲ್ಲೆಯಲ್ಲಿ 35 ಸಾವಿರ ಡೋಸ್ ಲಸಿಕೆ ಕೊರತೆ ಇದೆ ಎಂದು ಸ್ವತಃ ಸಚಿವರೇ ಹೇಳಿದ್ದರು.ಇದೀಗ ನಿನ್ನೆ ರಾತ್ರಿ ಜಿಲ್ಲೆಗೆ ಅಲ್ಪ ಪ್ರಮಾಣದ ಲಸಿಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಹಲವು ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಾಗಿ ಮೀಟರುಗಟ್ಟಲೆ ಕ್ಯೂ ನಲ್ಲಿ ಜನರು ನಿಂತ ದೃಶ್ಯ ಕಂಡುಬಂತು.ಅಂಬಾಗಿಲುವಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಲ್ ವಿಟಿ ಲಸಿಕೆ ಕೇಂದ್ರದಲ್ಲಿ ಲಸಿಕೆಗಾಗಿ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ!

Edited By : Shivu K
Kshetra Samachara

Kshetra Samachara

11/08/2021 01:00 pm

Cinque Terre

16.68 K

Cinque Terre

0

ಸಂಬಂಧಿತ ಸುದ್ದಿ