ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
ಉಡುಪಿ: ಭಾರತ ದೇಶವು ಪಾರಂಪರಿಕ ಆಯುರ್ವೇದವನ್ನು ಒಳಗೊಂಡ,ವೈದ್ಯಕೀಯ ಪರಂಪರೆ ಹೊಂದಿದ ದೇಶವಾಗಿದೆ. ಆದರೆ ಭಾರತೀಯರು ಹೆಚ್ಚಾಗಿ ಆಯುರ್ವೇದದ ಕಡೆ ಗಮನ ಹರಿಸುತ್ತಿಲ್ಲ ಎನ್ನುವುದು ನಂಬಲೇಬೇಕಾದ ವಿಚಾರವಾಗಿದೆ.ಹಿಂದೆಲ್ಲಾ ವೇದ-ಉಪನಿಷತ್ತುಗಳಲ್ಲಿ ಆಯುರ್ವೇದಕ್ಕೆ ವಿಶಿಷ್ಟವಾದ ಸ್ಥಾನಮಾನ ಇತ್ತು ಕಾಲಕ್ರಮೇಣ ಇಂಗ್ಲಿಷರ ಹಾವಳಿಯಿಂದ ಭಾರತೀಯ ಆಯುರ್ವೇದ ವೈದಿಕ ಪರಂಪರೆಯ ಮೇಲೆ ಪ್ರಭಾವ ಬೀರಿತು.
ಆದರೆ ಇದೀಗ ಕರೋನಾ ಮಹಾಮಾರಿ ಬಂದನಂತರ, ಒಂದಿಷ್ಟು ಗ್ರಾಮೀಣ ಭಾಗದ ಜನರು ಆಯುರ್ವೇದದ ಮೊರೆ ಹೋಗುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರಿಗೆ,ಆಯುರ್ವೇದ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಇದನ್ನು ಮನಗಂಡಂತಹ ಡಾಕ್ಟರ್ ವಾಣಿಶ್ರೀ ಐತಾಳ್ ತಮ್ಮ ಹುಟ್ಟೂರಿನಲ್ಲಿ ಬಡವರಿಗಾಗಿ ಅತೀ ಕಡಿಮೆ ಬೆಲೆಯಲ್ಲಿ ಆಯುರ್ವೇದ ಔಷಧಗಳನ್ನು ನೀಡುತ್ತಿದ್ದಾರೆ.
15 ವರ್ಷಗಳಿಂದ ಆಯುರ್ವೇದ ಪಂಚಕರ್ಮ ದಲ್ಲಿ ಅನುಭವ ಪಡೆದ ಡಾಕ್ಟರ್ ವಾಣಿಶ್ರೀಯವರು 12 ವರ್ಷಗಳಿಂದ ಬಿರ್ಲಾ ಆಯುರ್ವೇದಿಕ್ ಕಂಪನಿಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ಇದೀಗ ಗ್ರಾಮೀಣ ಭಾಗದ ಜನರ ಸೇವೆಗೆ ನಿಂತಿದ್ದಾರೆ. ಸಾಮಾನ್ಯ ಜನರಿಗೂ ಕೂಡ ಈ ಆಯುರ್ವೇದದ ಬಗ್ಗೆ ಮಾಹಿತಿ ಇರಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಮ್ಮ ಅಭಿಪ್ರಾಯವನ್ನು ವಾಣಿಶ್ರೀ ವ್ಯಕ್ತಪಡಿಸಿದ್ದಾರೆ.
Kshetra Samachara
19/11/2020 09:06 am