ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 800 ಹೆರಿಗೆ!

ವರದಿ : ಇರ್ಷಾದ್ ಕಿನ್ನಿಗೋಳಿ ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ಸರಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯೋರೆ ಜಾಸ್ತಿ. ಅದ್ರಲ್ಲೂ ಕರಾವಳಿಯಲ್ಲಿ ಸರಕಾರಿ ಆಸ್ಪತ್ರೆಯತ್ತ ತಲೆ ಎತ್ತಿ ನೋಡೋದೆ ಕಡಿಮೆ. ಆದರೆ, ಇದೀಗ ಕರಾವಳಿಯ ಸರಕಾರಿ ಅಸ್ಪತ್ರೆಯೊಂದು ಕ್ರಾಂತಿಕಾರಿ ದಾಖಲೆ ಬರೆದಿದೆ! ಈ ದಾಖಲೆಯೇ ಇದೀಗ ಈ ಆಸ್ಪತ್ರೆಯ ಹಿರಿಮೆ ಹೆಚ್ಚಿಸಿದೆ.

ಅಂದ ಹಾಗೆ, ಇದು ಮಂಗಳೂರಿನ‌ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಹಾಸಾಧನೆ.

ನಗರದಲ್ಲೇ ತಲೆ ಎತ್ತಿ ನಿಂತಿರುವ ಸುಮಾರು 170 ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಲೇಡಿಗೋಷನ್, ಮಹಿಳೆಯರ ಹೆರಿಗೆಗಾಗಿ ಮೀಸಲಾದ ಆಸ್ಪತ್ರೆ. ಈ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ 800 ಹೆರಿಗೆ ಮಾಡಿಸಲಾಗಿದೆ ಅನ್ನೋದೆ ಇದೀಗ ದೊಡ್ಡ ಸುದ್ದಿ. ಸಾಮಾನ್ಯವಾಗಿ ತಿಂಗಳಿಗೆ 400 ರಿಂದ 450 ರಷ್ಟು ಹೆರಿಗೆಗಳು ನಡೆಯುತ್ತಿದ್ದರೆ, ಇದೀಗ ಕಳೆದ ಅಕ್ಟೋಬರ್ ನ ಒಂದೇ ತಿಂಗಳಿನಲ್ಲಿ 800 ರಷ್ಟು ಹೆರಿಗೆ ಮಾಡಿಸುವ ಮೂಲಕ ಈ ಸರಕಾರಿ ಆಸ್ಪತ್ರೆ ದಾಖಲೆ ಬರೆದಿದೆ! ಕೋವಿಡ್ ಬಳಿಕ ಜನ ಈ ಸರಕಾರಿ ಆಸ್ಪತ್ರೆಯತ್ತ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇರುವಷ್ಟು ನಿಬಂಧನೆ ಇಲ್ಲಿ ಇಲ್ಲದೇ ಇರೋದು ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆ ಹೊಂದಿರೋದೆ ಈ ಸರಕಾರಿ ಆಸ್ಪತ್ರೆಯತ್ತ ಹೆಜ್ಜೆ ಹಾಕುವಂತೆ ಮಾಡಿದೆ.

"ಸದ್ಯ ಲೇಡಿಗೋಷನ್ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾದರೂ ಯಾವ ಹಂತದಲ್ಲೂ ಹಿಂದೆ ಉಳಿದಿಲ್ಲ. ಅತ್ಯುತ್ತಮ ಗುಣಮಟ್ಟದ ಸೇವೆ, ಉಚಿತ ಆಹಾರ, ಸ್ವಚ್ಛತೆ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಸಹಜವಾಗಿಯೇ ಕರಾವಳಿ ಮಾತ್ರವಲ್ಲದೆ, ಮಲ್ನಾಡು ಹಾಗೂ ಇನ್ನಿತರ ಹೊರಜಿಲ್ಲೆ, ಹೊರ ರಾಜ್ಯಗಳ ಮಂದಿಯನ್ನೂ ಆಕರ್ಷಿಸಿದೆ. ಅದೆಷ್ಟೋ ಕ್ರಿಟಿಕಲ್ ಕೇಸ್ ಗಳನ್ನೂ ನಿಭಾಯಿಸಬಲ್ಲ ವೈದ್ಯಕೀಯ ತಂಡವೂ ಇಲ್ಲಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಸಹಕಾರ, ಖಾಸಗಿ ಸಂಘ ಸಂಸ್ಥೆಗಳ ಸಹಕಾರವೂ ಲೇಡಿಗೋಷನ್ ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಿದೆ. ಸದ್ಯ ಲೇಡಿಗೋಷನ್ ಆಸ್ಪತ್ರೆಯಲ್ಲಿ 272 ಬೆಡ್ ಗಳಿದ್ದು, ಅದೆಲ್ಲವೂ ಭರ್ತಿಯಾಗುತ್ತಿದೆ. ಅಷ್ಟರ ಮಟ್ಟಿಗೆ ಕೋವಿಡ್ ಕಾಲದಲ್ಲಿ ಜನ ಈ ಸರಕಾರಿ ಆಸ್ಪತ್ರೆ ಮೇಲೆ ಭರವಸೆ ಇಡುವಂತಾಗಿದೆ"

" ಕೋವಿಡ್ ಸಂಕಷ್ಟದ ಆರಂಭ ಕಾಲದಿಂದಲೇ ಯಾವುದೇ ನಿರ್ಬಂಧಗಳಿಲ್ಲದೆ ಬಾಗಿಲು ತೆರೆದು ಗರ್ಭಿಣಿಯರ ಆರೈಕೆ ಮಾಡಿದ್ದೇ ಲೇಡಿಗೋಷನ್. ಇಲ್ಲಿನ ವೈದ್ಯಕೀಯ ಸಿಬ್ಬಂದಿಯ ನಿರಂತರ ನಿಸ್ವಾರ್ಥ ಸೇವೆಯೂ ಇದರ ಹಿಂದಿನ ಯಶಸ್ಸಿನ ಗುಟ್ಟು ಎಂದರೆ ತಪ್ಪಾಗದು. ಆದರೆ, ಐದು ಮಹಡಿಯ ಈ ಕಟ್ಟಡದಲ್ಲಿ ಇನ್ನೂ ಉತ್ತಮವಾಗಿ ಸೇವೆ ನೀಡಬಹುದಾದ ಸೌಕರ್ಯ ಇದೆಯಾದರೂ, ಸಿಬ್ಬಂದಿ ಕೊರತೆ ಮಾತ್ರ ಕಾಡುತ್ತಲೇ ಇದೆ. ಆದ್ದರಿಂದ ಸರಕಾರ ಈ ಬಗ್ಗೆ ಗಮನ ಹರಿಸಿದ್ರೆ, ಮಾದರಿ ಎನಿಸಿಕೊಂಡ ಈ ಸರಕಾರಿ ಆಸ್ಪತ್ರೆಯ ಸೇವೆ ಇನ್ನಷ್ಟು ಜನರಿಗೆ ತಲುಪಲು ಸಾಧ್ಯವಾದೀತು".

Edited By : Nagesh Gaonkar
Kshetra Samachara

Kshetra Samachara

03/11/2020 07:27 am

Cinque Terre

19.28 K

Cinque Terre

4

ಸಂಬಂಧಿತ ಸುದ್ದಿ