ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಪೊಲೀಸ್ ಠಾಣೆ, ನಾನಾ ಇಲಾಖೆಗಳ ಸಹಯೋಗದಲ್ಲಿ ಕೊರೊನಾ ಮುಂಜಾಗ್ರತಾ ಜಾಥಾ

ವರದಿ: ಶಫೀ ಉಚ್ಚಿಲ

ಪಡುಬಿದ್ರಿ: ಇಲ್ಲಿನ ಪೊಲೀಸ್ ಠಾಣೆ ಹಾಗೂ ನಾನಾ ಇಲಾಖೆಗಳ ಸಹಯೋಗದೊಂದಿಗೆ ಮೇಲಾಧಿಕಾರಿಗಳ ಆ್ಯಕ್ಷನ್ ಪ್ಲ್ಯಾನ್ ಪ್ರಕಾರ ಸಾರ್ವಜನಿಕರಲ್ಲಿ ಕೊರೊನಾ ತಡೆಗಟ್ಟುವ ಬಗ್ಗೆ ಪಡುಬಿದ್ರಿ ಪೇಟೆಯಲ್ಲಿ ಜಾಗೃತಿ ಜಾಥಾ ನಡೆಯಿತು.

ಪಡುಬಿದ್ರಿ ಪೇಟೆಯಿಂದಾಗಿ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆಯಲ್ಲಿ ಜಾಥಾ ನಡೆಯಿತು. ಪಡುಬಿದ್ರಿ ಪಿಎಸ್ಸೈ ದಿಲೀಪ್ ಅವರು ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ನೀಡಿದರು. ಜಾಥಾದಲ್ಲಿ ಪಡುಬಿದ್ರಿ ಆರೋಗ್ಯಾಧಿಕಾರಿ ರಾಜಶ್ರೀ, ಆಶಾ ಕಾರ್ಯಕರ್ತರು, ಲಯನ್ಸ್ ಹಾಗೂ ರೋಟರಿ ಕ್ಲಬ್ ಸದಸ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

20/10/2020 12:54 pm

Cinque Terre

26.48 K

Cinque Terre

1