ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಜನರಲ್ಲಿ ಕೊರೊನಾ ಕುರಿತಾಗಿ ಜಾಗೃತಿಯನ್ನು ಮೂಡಿಸಲು ನನ್ನ ಕುಟುಂಬ ನನ್ನ ಜವಾಬ್ದಾರಿ ಎಂಬ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು " ಉಡುಪಿ ಜಿಲ್ಲೆ ಕೊವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಯಂತ್ರಣ ಮಾಡುವಲ್ಲಿ ಸಫಲವಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ರೋಗ ಸಾರ್ವಜನಿಕರಲ್ಲಿ ಹರಡದಂತೆ ರಿವರ್ಸ್ ಕ್ವಾರಂಟೈನ್ ಮಾದರಿಯನ್ನು ಜಿಲ್ಲೆಯಲ್ಲಿ ಅಳವಡಿಸುತ್ತೇವೆ.
ಇದರಲ್ಲಿ ಆರೋಗ್ಯವಂತರು ಹಾಗೂ ಹಿರಿಯ ನಾಗರಿಕರು ರೋಗಕ್ಕೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗುವುದು.
ಅಧಿಕಾರಿಗಳು ಪ್ರತಿ ಮನೆಯನ್ನು ಭೇಟಿ ಮಾಡಿ ಮನೆಯ ಹೊರಗಡೆ ಕೊವಿಡ್ ಮುಂಜಾಗ್ರತೆಗೆ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳ ಕರಪತ್ರವನ್ನು ಅಂಟಿಸುತ್ತಾರೆ. ಮತ್ತು ಕುಟುಂಬದವರಿಂದ ಪ್ರತಿಜ್ಙಾ ಹಾಳೆಯ ಮೇಲೆ ಸಹಿಯನ್ನು ಸ್ವೀಕರಿಸಲಾಗುವುದು. ಇದೇ ರೀತಿ ಆಶಾ ಕಾರ್ಯಕರ್ತರು ಪ್ರತಿ ಮನೆಗಳಿಗೆ ಭೇಟಿ ನೀಡಿ ಪಲ್ಸ್ ಆಕ್ಸಿಮೀಟರ್ ಬಳಸಿ ಸಾರ್ವಜನಿಕರ ಆಮ್ಲಜನಕದ ಮಟ್ಟ ಮತ್ತು ನಾಡಿಮಿಡಿತದ ಮಟ್ಟವನ್ನು ಪರೀಕ್ಷೆ ಮಾಡಲಿದ್ದಾರೆ ಎಂದರು.
Kshetra Samachara
16/10/2020 08:41 pm