ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರದಿಂದ ಬಿದ್ದು ಹಾಸಿಗೆ ಹಿಡಿದಿದ್ದ ಯುವಕನಿಗೆ ಸಿ.ಎಂ ನಿಧಿಯಿಂದ ಲಕ್ಷ ರೂಪಾಯಿ ಪರಿಹಾರ

ಉಳ್ಳಾಲ: ಕೊರೊನ ಲಾಕ್ಡೌನ್ ಸಂದರ್ಭ ಹಣ್ಣು ಕೀಳಲು ಹಲಸಿನ ಮರವೇರಿ ಕೆಳಗೆ ಬಿದ್ದು ಅಂಗಾಂಗಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ ಯುವಕನೋರ್ವನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನ ಲಭಿಸಿದೆ.

ಬೆಳ್ಮ ಗ್ರಾಮದ ಬರಿಕೆ, ಕುಂಭಲಚ್ಚಿಲ್ ನಿವಾಸಿಗಳಾದ ಬಾಲಕೃಷ್ಣ ಪೂಜಾರಿ ಮತ್ತು ಪುಷ್ಪವತಿ ದಂಪತಿಯ ದ್ವಿತೀಯ ಪುತ್ರ ಭಾಸ್ಕರ ಪೂಜಾರಿ ಅವರು ಕಳೆದ ಒಂದೂವರೆ ವರುಷದ ಹಿಂದೆ ಹಣ್ಣು ಕೀಳಲು ಹಲಸಿನ ಮರ ಏರಿದ್ದ ವೇಳೆ ರೆಂಬೆ ತುಂಡಾಗಿ‌ ಕೆಳಗೆ ಬಿದ್ದು ಅಂಗಾಂಗಗಳ ಸ್ವಾಧೀನವನ್ನೇ ಕಳಕೊಂಡು ಹಾಸಿಗೆ ಹಿಡಿದಿದ್ದರು. ಆ ಸಂದರ್ಭದಲ್ಲಿ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಭಾಸ್ಕರ್ ಅವರಿಗೆ ವೈಯಕ್ತಿಕ ಸಹಾಯ ನೀಡಿದಲ್ಲದೆ ವಿಶೇಷ ಮುತುವರ್ಜಿ ವಹಿಸಿ ಅಂದಿನ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಪರಿಹಾರ ನಿಧಿಗಾಗಿ ಮನವಿ ಮಾಡಿದ್ದರು. ಮಾಜಿ ಸಿ.ಎಂ ಬಿಎಸ್‌ವೈ ಆದೇಶದಂತೆ ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಭಾಸ್ಕರ್ ಅವರಿಗೆ ಒಂದು ಲಕ್ಷ ರೂಪಾಯಿ‌ಗಳನ್ನ ಪರಿಹಾರವಾಗಿ ನೀಡಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ‌ ಉಳಿದೊಟ್ಟು, ದಿ.ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ‌ ಮಾಜಿ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್ ನೇತೃತ್ವದ ತಂಡದ ಸದಸ್ಯರು ಪರಿಹಾರ ನಿಧಿಯ ಫಲಾನುಭವಿ ಭಾಸ್ಕರ್ ಅವರನ್ನ‌ ಭೇಟಿ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

Edited By : Shivu K
Kshetra Samachara

Kshetra Samachara

12/09/2022 06:41 pm

Cinque Terre

6.13 K

Cinque Terre

0

ಸಂಬಂಧಿತ ಸುದ್ದಿ