ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಶೀಘ್ರದಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲಾಕಟ್ಟಡ ತೆರವು

ಉಡುಪಿ ಡಿಡಿಪಿಐ ಭರವಸೆ

ಕಾಪು: ಪಡುಬಿದ್ರಿ ಸರ್ಕಾರಿ ಬೋರ್ಡ್ ಸ್ಕೂಲ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾದರೂ, ವ್ಯವಸ್ಥೆ ಬದಲಾಗದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೂ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪ್ರಭಾರ ಡಿಡಿಪಿಐ ಗೋವಿಂದ ಮಡಿವಾಳ ಕೆಲವೇ ದಿನಗಳಲ್ಲಿ ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ಕಾಮಗಾರಿ ನಡೆಸುವುದಾಗಿ ಹೇಳಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ನಮ್ಮೂರಿಗೆ ಬಂತು ಎಂಬ ಸಂತೋಷದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸಾಲು ಸಾಲಾಗಿ ಶಾಲೆಗೆ ಸೇರಿಸಿದ್ದರು. ಮಕ್ಕಳಿಗೆ ವಿದ್ಯಾರ್ಜನೆ ನಡೆಸಲು ಸರಿಯಾದ ಕಟ್ಟಡ ವ್ಯವಸ್ಥೆಯೆ ಸರಿಯಾಗಿ ಇಲ್ಲದೇ ಅವರಲ್ಲಿ ಬೇಸರ ಮೂಡಿತ್ತು. ಇದೀಗ ಶಾಲಾ ಉಸ್ತುವಾರಿ ಸಮಿತಿ ಹಾಗೂ ಪೋಷಕರ ಪ್ರಮುಖ ಬೇಡಿಕೆಯಾದ ಶಿಥಿಲಗೊಂಡಿರುವ ಕಟ್ಟಡವನ್ನು ಶೀಘ್ರದಲ್ಲಿ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಭಾರ ಡಿಡಿಪಿಐಯವರ ಭರವಸೆಯಿಂದ ಮಕ್ಕಳ ಪೋಷಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Edited By : Somashekar
Kshetra Samachara

Kshetra Samachara

06/07/2022 12:26 pm

Cinque Terre

13.9 K

Cinque Terre

1

ಸಂಬಂಧಿತ ಸುದ್ದಿ