ಸುಳ್ಯ: ಭೂ ಕಂಪನ ಉಂಟಾಗಿ ಮನೆಗಳಿಗೆ ಬಿರುಕು ಉಂಟಾಗಿರುವ ಹಿನ್ನಲೆಯಲ್ಲಿ ಸಂಪಾಜೆಗೆ ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಗಳಿಗೆ ಹಾನಿ ಆಗಿರುವ ಬಗ್ಗೆ ಇಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಿ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿತಾಲಕ್ಷ್ಮಿ ಕಂದಾಯ ನೀರಿಕ್ಷಕ ಕೊರಗಪ್ಪ ಹೆಗ್ಡೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಗ್ರಾಮ ಕರಣಿಕರಾದ ಮಿಯಾ ಸಾಬ್ ಮುಲ್ಲಾ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್, ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಪಿ. ಕೆ. ಎಸ್. ಕೆ. ಹನೀಫ್,ವಿಜಯ ಅಲಡ್ಕ, ರಜನಿ ಶರತ್, ಸೊಸೈಟಿ ನಿರ್ದೇಶಕ ರಾದ ಗಣಪತಿ ಭಟ್ ಪಿ. ಎನ್. ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಪ್ರಶಾಂತ್ ಇ. ವಿ., ಸಿ.ಎಂ.ಅಬ್ದುಲ್ಲ ಉಪಸ್ಥಿತರಿದ್ದರು.
Kshetra Samachara
29/06/2022 07:59 pm