ಉಡುಪಿ: 76 ಬಡಗುಬೆಟ್ಟು ಮೂಡುಮನೆ ಕುಟುಂಬಕ್ಕೆ ಸೇರಿದ ಸುಮಾರು 300 ವರ್ಷಗಳಷ್ಟು ಪುರಾತನವಾದ ಹಲವು ಪ್ರಾಚೀನ ಲೋಹದ ವಸ್ತುಗಳನ್ನು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಪದವಿ ಕಾಲೇಜಿನ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಯಿತು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನ, ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರಾಚೀನ ವಸ್ತುಗಳ ಹಸ್ತಾಂತರ ಕಾಯಕ್ರಮವು ಇಂದು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಭಾರತೀಯ ಸಂಸ್ಕೃತಿಯು ವಿಶ್ವದ ಅತ್ಯಂತ ಪುರಾತನ ಮತ್ತು ಭವ್ಯ ಸಂಸ್ಕೃತಿಯಾಗಿದ್ದು, ಕ್ರಿಸ್ತಪೂರ್ವದಲ್ಲಿಯೇ ನಮ್ಮ ಸಂಸ್ಕೃತಿ ಉದಯವಾಗಿತ್ತು.
ಇಂದಿಗೂ ಹಳೆಯ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಹಲವು ಪುರಾತನ ವಸ್ತುಗಳು ದೊರೆಯುತ್ತಿದ್ದು, ಇವುಗಳು ನಮ್ಮ ಅಂದಿನ ಸಂಸ್ಕೃತಿಯ ವೈಭವವನ್ನು ಸಾರಿ ಹೇಳುತ್ತವೆ ಎಂದರು.
ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ಮುಖ್ಯಸ್ಥ ಭೀಮಾ ಶಂಕರ್ ಉದ್ಘಾಟಿಸಿದರು.
Kshetra Samachara
11/06/2022 09:56 pm