ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ರಿಕ್ಷಾ ನಿಲ್ದಾಣ ಸ್ಥಳಾಂತರಕ್ಕೆ ಜಾಗ ಕೊಡಿ

ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿ ರಸ್ತೆ ಸಮೀಪವಿರುವ ವಿನಾಯಕ ಟಾಕೀಸ್ ಬಳಿಯ ರಿಕ್ಷಾ ನಿಲ್ದಾಣಕ್ಕೆ ಅನಧಿಕೃತ ನಿಲುಗಡೆ ನಿಷೇಧಸಿದೆ ಎಂದು ಪುರಸಭೆ ಸೂಚನಾ ಫಲಕ ಹಾಕಿದೆ. ಕೋಡಿ ಪ್ರದೇಶದ ಜನರಿಗೆ ಈ ರಿಕ್ಷಾ ನಿಲ್ದಾಣ ಆಸ್ಪತ್ರೆ, ಶಾಲಾ ಕಾಲೇಜು, ಸಮುದ್ರ ತೀರಕ್ಕೆ ಹೋಗಲು ಅನುಕೂಲಕರವಾಗಿದೆ. ಇದೀಗ ಅಲ್ಲಿನ ರಿಕ್ಷಾ ಚಾಲಕರಿಗೆ ಬೇರೆ ಜಾಗವನ್ನು ಪುರಸಭೆಯವರು ಮಾಡಿಕೊಡಬೇಕಾಗಿದೆ. ಒಂದು ವೇಳೆ ಪರ್ಯಾಯ ನಿಲ್ದಾಣ ಮಾಡಿಕೊಡದೆ ಈಗಿರುವ ನಿಲ್ದಾಣದಿಂದ ಓಡಿಸಲು ಪ್ರಯತ್ನಿಸಿದರೆ ಪ್ರತಿಭಟನೆ ನೆಡೆಸೋದಾಗಿ ಅಲ್ಲಿನ ರಿಕ್ಷಾ ಚಾಲಕರು ನಿರ್ಣಯಿಸಿದ್ದಾರೆ.

Edited By :
Kshetra Samachara

Kshetra Samachara

31/03/2022 04:31 pm

Cinque Terre

3.92 K

Cinque Terre

0

ಸಂಬಂಧಿತ ಸುದ್ದಿ