ಕುಂದಾಪುರ: ಕುಂದಾಪುರ ರೈಲು ನಿಲ್ದಾಣದಲ್ಲಿ ಪಿ ಆರ್ ಎಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ರೈಲ್ವೇ ಹೋರಾಟ ಸಮಿತಿ ಕುಂದಾಪುರ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದಾಗಿ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿದೆ.
ಕುಂದಾಪುರ ನಿಲ್ದಾಣದಲ್ಲಿಯೇ ಹೊಸ ಪಿ ಆರ್ ಎಸ್ (PRS) ವ್ಯವಸ್ಥೆ ಆರಂಬಿಸಲು ರೈಲ್ವೇ ಮಂಡಳಿ ಕೊಂಕಣ ರೈಲ್ವೆಗೆ ಸೂಚನೆ ನೀಡಿದೆ.
ಪ್ರಸ್ತುತ ಕುಂದಾಪುರ ಪೋಸ್ಟ್ ಆಫೀಸಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿ ಅರ್ ಎಸ್ ನಲ್ಲಿನ ತಾಂತ್ರಿಕ ಸಮಸ್ಯೆಗಳು, ರಜಾ ದಿನಗಳ ಅಲಭ್ಯತೆ, ಇತರ ಟಿಕೆಟ್ ಸಂಬಂಧಿ ಕೆಲಸಗಳಾದ ರದ್ದತಿ, ಬದಲಾವಣೆ ಇತ್ಯಾದಿ ಚಟುವಟಿಕೆಗಳ ಕೊರತೆ ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಯವರಿಗೆ ಮನವಿ ಮಾಡಿದ್ದರು.
ಕೃಷಿ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗು ರೈಲು ಮಂಡಳಿಯ ಅಧಿಕಾರಿಗಳಿಗೆ ಸಂಪರ್ಕಿಸಿ, ಕುಂದಾಪುರ ನಿಲ್ದಾಣದಲ್ಲಿ ಪಿ ಆರ್ ಎಸ್ ಆರಂಬಿಸಲು ಮನವಿ ಮಾಡಿದ್ದರು. ಕೊಂಕಣ ರೈಲ್ವೆಯು ತಕ್ಷಣದಲ್ಲಿಯೇ ಪಿ ಆರ್ ಎಸ್ (PRS) ವ್ಯವಸ್ಥೆಯನ್ನು ತಕ್ಷಣದಲ್ಲೇ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಿದೆ.
Kshetra Samachara
24/12/2021 06:47 pm