ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಲೈಟ್ ಹೌಸ್ ನ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಕಾಪು : ರಾಷ್ಟ್ರೀಯ ಲೈಟ್ ಹೌಸ್ ದಿನ ಮತ್ತು ಕಾಪು ದೀಪಸ್ತಂಭ ಸ್ಥಾಪನೆಗೊಂಡು 120ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಂಚೆ ಅಧೀಕ್ಷಕರ ಕಚೇರಿ ಉಡುಪಿ ವಲಯ ಸಿದ್ಧಪಡಿಸಿರುವ ದೀಪಸ್ತಂಭದ ಅಂಚೆ ಲಕೋಟೆಯನ್ನು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್. ವಿ. ಆರ್. ಮೂರ್ತಿ ಕಾಪು ಅಂಚೆ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್ ನ ಕಾರ್ಯನಿರ್ವಹಣೆ, ಅವಶ್ಯಕತೆ ಮತ್ತು ಇತಿಹಾಸವನ್ನು ಜನರಿಗೆ ತಿಳಿಸುವುದರೊಂದಿಗೆ ದೇಶವಿದೇಶಗಳ ಪ್ರಜೆಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಸಿದ್ದಪಡಿಸಿದೆ ಎಂದರು.

ಕಳತ್ತೂರು ಪದ್ಮಾವತಿ ಶೆಟ್ಟಿ ಗುರ್ಮೆ ಫೌಂಡೇಶನ್ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಅಂಚೆ ಲಕೋಟೆಯ ಪ್ರಾಯೋಜಕತ್ವ ವಹಿಸಿದ್ದರು.

ಅಂಚೆಚೀಟಿ ಸಂಗ್ರಾಹಕ ಮಂಗಳೂರಿನ ಕೆ. ಶ್ರೀಧರ್ ಅವರಿಂದ ಲೈಟ್ ಹೌಸ್ ಗಳ ಮಾಹಿತಿಗಳೆಲ್ಲಾ ವಿಶೇಷ ಅಂಚೆ ಚೀಟಿಗಳ ಪ್ರದರ್ಶನ ನಡೆಯಿತು.

ಈ ಸಂದರ್ಭ ಶೇಖರ್.ಬಿ ಶೆಟ್ಟಿ ಕಳತ್ತೂರು, ಸಮಾಜಸೇವೆ ವೇದಿಕೆ ಅಧ್ಯಕ್ಷ ಮಹಮ್ಮದ್ ಫಾರೂಕ್, ಜನಸಂಪರ್ಕ ಸೇವಾ ವೇದಿಕೆ ಅಧ್ಯಕ್ಷ ದಿವಾಕರ ಶೆಟ್ಟಿ, ಉಡುಪಿ ವಲಯ ಅಂಚೆ ಅಧೀಕ್ಷಕ ನವೀನ್ ಚಂದರ್ ಮತ್ತಿತರರು ಉಪಸ್ಥಿತರಿದ್ದರು

Edited By : Shivu K
Kshetra Samachara

Kshetra Samachara

22/09/2021 02:15 pm

Cinque Terre

5.79 K

Cinque Terre

0

ಸಂಬಂಧಿತ ಸುದ್ದಿ