ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಪಡುಬಿದ್ರಿಯ ಫಲಿಮಾರಿನಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಇಡೀ ದಿನ ಗೃಹಸಚಿವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಡಿ.ಸಿ. ಬಳಿಕ ಸಂಜೆ ಗ್ರಾಮ ವಾಸ್ತವ್ಯಕ್ಕೆ ತೆರಳಿದರು. ಫಲಿಮಾರಿನಲ್ಲಿ ನಿವೇಶನ ಹಂಚಿಕೆಗಾಗಿ ಗುರುತಿಸಲ್ಪಟ್ಟ ಆರಂತಡೆ - ಆನಡ್ಕದಲ್ಲಿ ಭೂಮಿಗಳನ್ನು ವೀಕ್ಷಿಸಿದರು. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಜಿ.ಜಗದೀಶ್, ನಿವೇಶನಗಳ ಹಂಚಿಕೆಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಳಿಕ ಗ್ರಾಮದ ಆಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಡಿ.ಸಿ. ನೇತೃತ್ವದ ತಂಡವು ಆಣೆಕಟ್ಟಿನ ಕಾಲುವೆಯ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಗ್ರಾಮ ವಾಸ್ತವ್ಯದಲ್ಲಿ ವಿದ್ಯಾರ್ಥಿಗಳ ಜೊತೆ ಡಿ.ಸಿ. ಸಂವಾದ ನಡೆಸಿದರು. ಜಿಲ್ಲೆಯಲ್ಲಿ ಐಎಎಸ್ ತರಬೇತಿ ಕಾರ್ಯಾಗಾರ ಆಯೋಜಿಸುವ ಹಂಬಲವನ್ನು ಜಿಲ್ಲಾಧಿಕಾರಿ ಈ ವೇಳೆ ವ್ಯಕ್ತಪಡಿಸಿದರು.
Kshetra Samachara
21/02/2021 12:04 pm