ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಶಾಂತವೀರ ಶಿವಪ್ಪ ಅವರಿಂದು ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಈ ಭೇಟಿ ನಡೆಯಿತು.ಆಸ್ಪತ್ರೆಗೆ ಆಗಮಿಸಿದ ನ್ಯಾಯಮೂರ್ತಿಗಳು ಆಸ್ಪತ್ರೆ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.ಆಸ್ಪತ್ರೆಯ ಔಷಧಾಲಯ, ಪ್ರಯೋಗಾಲಯ ಮತ್ತು ವಾರ್ಡ್ ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.ಈ ವೇಳೆ ನ್ಯಾಯಮೂರ್ತಿಗಳಿಗೆ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಆಸ್ಪತ್ರೆಯ ಮಾಹಿತಿ ನೀಡಿದರು.
ಖಾಸಗಿ ಮ್ಯಾನೇಜ್ ಮೆಂಟ್ ನ ಅಡಿ ಕಾರ್ಯನಿರ್ವಹಿಸುತ್ತಿದ್ದ ಉಡುಪಿಯ ಹಾಜಿ ಅಬ್ದುಲ್ಲಾ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಆಸ್ಪತ್ರೆಯನ್ಬು ಇತ್ತಿಚೆಗೆ ಸರಕಾರವೇ ವಹಿಸಿಕೊಂಡಿದೆ.ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕುಂದುಕೊರತೆ ವೀಕ್ಷಸಿಲು ನ್ಯಾಯಾಧೀಶರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ನ್ಯಾಯಮೂರ್ತಿಗಳ ಜೊತೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು ಅವರಿದ್ದರು.
ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ನ್ಯಾಯಮೂರ್ತಿ ಶಾಂತವೀರ ಶಿವಪ್ಪ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ದಿಡೀರ್ ಭೇಟಿ ನೀಡಿದ್ದೇವೆ.
ಆಸ್ಪತ್ರೆಯ ಕುಂದುಕೊರತೆ ವೀಕ್ಷಣೆ ಮಾಡಿದ್ದೇವೆ. ಸರಕಾರಿ ಆಸ್ಪತ್ರೆಗಳಲ್ಲಿರುವ ಕುಂದುಕೊರತೆ ಮತ್ತು ಸಮಸ್ಯೆಗಳನ್ನು ಪಟ್ಟಿಮಾಡಿ ವರದಿ ನೀಡಲಿದ್ದೇವೆ. ಸದ್ಯ ಇಲ್ಲಿ ಅತ್ಯುತ್ತಮ ರೀತಿಯಲ್ಲಿ ಸ್ವಚ್ಛತೆ ಮೇಂಟೇನ್ ಮಾಡುತ್ತಿದ್ದಾರೆ.ಸಿಬ್ಬಂದಿಗಳ ಕೊರತೆ ಇಲ್ಲಿ ತುಂಬ ಇದೆ.ಕೌನ್ಸೆಲಿಂಗ್ ಮೂಲಕ ಸಿಬ್ಬಂದಿ ನೇಮಕ ಶೀಘ್ರ ಆಗಬೇಕಿದೆ.ಈ ಸಂಬಂಧ ನಾವು ವರದಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.
PublicNext
15/07/2022 04:32 pm