ಕಲ್ಯಾಣಪುರ: ಉಕ್ರೇನ್ ನಲ್ಲಿ ಸಿಲುಕಿದ್ದ ಮತ್ತೋರ್ವ ವಿದ್ಯಾರ್ಥಿನಿ ಅನೀಫ್ರೆಡ್ ರೆಡ್ಲೀ ಡಿಸೋಜಾ, ಮನೆಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ತನ್ನ ಆತಂಕದ ದಿನಗಳನ್ನು ಮೆಲುಕು ಹಾಕಿರುವ ವಿದ್ಯಾರ್ಥಿನಿ , ಮಾತೃಭೂಮಿಯ ಮೇಲೆ ನನಗೆ ಪ್ರೀತಿ ಜಾಸ್ತಿಯಾಗಿದೆ. ದಕ್ಷಿಣ ಭಾರತೀಯರಿಗೂ ಈಗ ಯುದ್ಧದ ಅನುಭವವಾಯಿತು. ತಂದೆ ತಾಯಿಯನ್ನು ನೋಡಲೆಂದೇ ಬದುಕಿ ಬಂದೆ ಎಂದ ಅನೀಫ್ರೆಡ್ ರೆಡ್ಲೀ ಡಿಸೋಜಾ, ಉಕ್ರೇನ್ ಪ್ರಜೆಗಳು ನಮ್ಮನ್ನು ಥಳಿಸಿ ರೈಲಿನಿಂದ ತಳ್ಳಿದರು ಎಂದು ತಮ್ಮ ಅನುಭವ ಹೇಳಿಕೊಂಡರು.
Kshetra Samachara
09/03/2022 04:54 pm