ಕಾರ್ಕಳ: ಕೋವಿಡ್ ನಿಂದ ಮೃತಪಟ್ಟ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ 38 ಮಂದಿ ಮೃತ ವ್ಯಕ್ತಿಗಳ ವಾರಸುದಾರರಿಗೆ ತಲಾ 1 ಲಕ್ಷ ರೂ. ಪರಿಹಾರ ಚೆಕ್ ನ್ನು ನೀಡಲಾಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಪರಿಹಾರ ಚೆಕ್ ನ್ನು ಇಂದು ಕಾರ್ಕಳದಲ್ಲಿ ವಿತರಿಸಿದರು. ಕೋವಿಡ್19 ಮತ್ತೆ ಒಮಿಕ್ರಾನ್ ಆಗಿ ರೂಪಾಂತರಗೊಂಡು ಸೋಂಕು ವ್ಯಾಪಿಸುತ್ತಿದೆ. ಜನ ಜಾಗೃತರಾಗಿರುವುದರೊಂದಿಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.
ತಹಶೀಲ್ದಾರ್ ಪುರಂದರ ಕೆ ,ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
18/12/2021 09:19 pm