ಮಂಗಳೂರು: ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಕಾರ್ಪೊರೇಟರ್ ಗಳ ಸಹಿತ ಅಧಿಕಾರಿಗಳ ಸಭೆ ನಡೆಯಿತು.ಈ ವೇಳೆ ಮಾತನಾಡಿದ ಮೇಯರ್ ದಿವಾಕರ್ ಪಾಂಡೇಶ್ವರ್, ಘನತ್ಯಾಜ್ಯ ನಿಯಮ 2016ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಹೀಗಾಗಿ ಕಸ ಪ್ರತ್ಯೇಕಿಸುವಿಕೆ ಕಡ್ಡಾಯಗೊಳಿಸಿದೆ. ಇದನ್ನು ಯಶಸ್ವಿಗೊಳಿಸಲು ಮನೆ ಮನೆಗೆ ತೆರಳಿ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಜನರು ಸಹಕಾರ ನೀಡಬೇಕು. ಕಾರ್ಪೊರೇಟರ್ ಗಳು , ಅಧಿಕಾರಿಗಳು ಈ ಬಗ್ಗೆ ಪರಸ್ಪರ ಸಮನ್ವಯತೆಯಿಂದ ಸಹಕಾರ ನೀಡಬೇಕು. ಆ್ಯಂಟನಿ ವೇಸ್ಟ್ ಸಂಸ್ಥೆಯವರಿಗೆ ಸರಿಯಾದ ಸೂಚನೆ ನೀಡಬೇಕು. ಕಸ ವಿಲೇವಾರಿಗೆ ವಾಹನ ಬಾರದಿರುವ ಬಗ್ಗೆ ಜನರಿಂದ ದೂರು ಬರಬಾರದು. ಈ ಕುರಿತು ಆ್ಯಂಟನಿ ವೇಸ್ಟ್ ನ ಎಲ್ಲಾ ಮೇಲ್ವಿಚಾರಕರನ್ನೂ ಕರೆದು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವಂತೆ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮೇಯರ್ ಸೂಚಿಸಿದರು.
Kshetra Samachara
21/10/2020 12:34 pm