ಮೂಡುಬಿದಿರೆ: ಸೋನಿ ಟಿವಿ ನಡೆಸಿದ ಇಂಡಿಯನ್ ಐಡಲ್ ಸೀಸನ್ 12 ರಾಷ್ಟ್ರೀಯ ರಿಯಾಲಿಟಿ ಶೋನಲ್ಲಿ ಫೈನಲ್ ತಲುಪಿ 5ನೇ ಸ್ಥಾನವನ್ನು ಪಡೆದು ಗುರುವಾರ ಹುಟ್ಟೂರಿಗೆ ಆಗಮಿಸಿರುವ ಮೂಡುಬಿದಿರೆಯ ಯುವ ಗಾಯಕ ನಿಹಾಲ್ ತಾವ್ರೋ ಅವರನ್ನು ಆಲಂಗಾರು ಚರ್ಚ್ ಪಾಲನಾ ಸಮಿತಿಯು ಸ್ವಾಗತಿಸಿ, ಅಭಿನಂದಿಸಿತು.
ಆಲಂಗಾರು ಹೋಲಿ ರೋಸರಿ ಚರ್ಚ್ನ ಆವರಣದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಚರ್ಚ್ನ ಧರ್ಮಗುರು ರೆ.ಫಾ ವಾಲ್ಟರ್ ಡಿಸೋಜ ಸಭೆಯನ್ನುದ್ದೇಶಿಸಿ ಮಾತನಾಡಿ ಇಂಡಿಯಲ್ ಐಡಲ್‌ನಲ್ಲಿ ಸ್ಪರ್ಧಿಸಿ ಫೈನಲ್‌ಗೆ ತಲುಪಿದ ಕರ್ನಾಟಕ ರಾಜ್ಯದ ಏಕೈಕ ಯುವ ಗಾಯಕ ನಿಹಾಲ್ ತಾವ್ರೋ. ಫೈನಲ್‌ಗೆ ತಲುಪುವುದು ಅಷ್ಟು ಸುಲಭದ ಕೆಲಸ ಅಲ್ಲ,ಅದಕ್ಕೆ ಸತತ ಪರಿಶ್ರಮ ಬೇಕು. ನಿಹಾಲ್ ಅಭ್ಯಾಸ ಮಾಡಿದ್ದರಿಂದ ಈ ಹಂತಕ್ಕೆ ತಲುಪಲು ಸಾಧ್ಯವಾಯಿತೆಂದು ಹೇಳಿದರು.
ಗಾಯಕ ನಿಹಾಲ್ ತಾವ್ರೋ ಮಾತನಾಡಿ ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಿಂದ ಮತ್ತು ನಮ್ಮೂರಿನಿಂದ ತುಂಬಾ ಜನರು ಓಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿದರೆ. ಇಂಡಿಯನ್ ಐಡಲ್‌ನಲ್ಲಿ ನಾನು ಇಷ್ಟು ಪ್ರಸಿದ್ಧಿಯಾಗುತ್ತೇನೆಂದು ತಿಳಿದಿರಲಿಲ್ಲ ಎಲ್ಲರ ಸಹಕಾರ ಹಾಗೂ ಆಶೀರ್ವಾದದಿಂದ ತಾನು ಫೈನಲಿಸ್ಟ್ ಆಗಿ ಗುರುತಿಸಿಕೊಂಡದ್ದು ಸಂತಸ ನೀಡಿದೆ ಎಂದರು.
ಆಲಗಾರು ನಿತ್ಯಾಧರ್ ನಿವಾಸ್ ಸುಪೀರಿಯರ್ ರೆ.ಫಾ ರಾಕೇಶ್ ಮಥಾಯಸ್, ಭಾರತೀಯ ಕ್ರೆöÊಸ್ತ ಯುವ ಸಂಚಲನದ ಮೂಡುಬಿದಿರೆ ವಲಯದ ನಿರ್ದೇಶಕ ರೆ.ಫಾ ಪ್ರೇಮ್ ಕುಟಿನ್ಹಾ, ನಿಹಾಲ್ ತಾವ್ರೋ ಅವರ ತಂದೆ ಹೆರಾಲ್ಡ್ ತಾವ್ರೋ, ತಾಯಿ ಪ್ರೆಸಿಲ್ಲಾ ತಾವ್ರೋ ಉಪಸ್ಥಿತರಿದ್ದರು. ಚರ್ಚ್ ಆಯೋಗಗಳ ಸಂಚಾಲಕ ರಾಜೇಶ್ ಕಡಲಕೆರೆ ಸ್ವಾಗತಿಸಿದರು. ಸಂತೋಷ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಮೇಬಲ್ ಡಿಸೋಜ ವಂದಿಸಿದರು.
ನಿಹಾಲ್ ಅವರನ್ನು ಆಲಂಗಾರು ಕಟ್ಟೆಯ ಬಳಿಯಲ್ಲಿ ಸ್ವಾಗತಿಸಿ ತೆರೆದ ಜೀಪಿನಲ್ಲಿ ಮೆರವಣಿಗೆಯೊಂದಿಗೆ ಚರ್ಚ್ಗೆ ಕರೆದುಕೊಂಡು ಬರಲಾಯಿತು.
Kshetra Samachara
19/08/2021 06:34 pm