ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯ ನಿಹಾಲ್ ತಾವ್ರೋ 'ಇಂಡಿಯನ್‌ ಐಡೋಲ್ ಗಾಯನ ಸ್ಪರ್ಧೆ'ಯ ಪ್ರಶಸ್ತಿ ಸನಿಹ

ಮೂಡುಬಿದಿರೆ: ಮೂಡುಬಿದಿರೆಯ ಕಡಲಕೆರೆ ಪರಿಸರದ ನಿಹಾಲ್‌ ತಾವ್ರೋ ತಮ್ಮ ಕಂಠಸಿರಿಯ ಮೂಲಕ ದೇಶದ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಹೌದು. ಸೋನಿ ಟಿವಿಯ ಇಂಡಿಯನ್‌ ಐಡೋಲ್ ಗಾಯನ ರಿಯಾಲಿಟಿ ಶೋ ಸ್ಪರ್ಧೆಯ ಅಂತಿಮ ಕಣಕ್ಕೆ ನಿಹಾಲ್ ತಾವ್ರೋ ಕೂಡ ಆಯ್ಕೆಯಾಗಿದ್ದಾರೆ. ಒಟ್ಟು 6 ಮಂದಿ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ. ಈ ಅವಕಾಶ ಪಡೆದ ಮೊದಲ ಕನ್ನಡಿಗ ತಾವ್ರೋ ಆಗಿದ್ದಾರೆ.

ನಿಹಾಲ್ ಅಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾರೆ. ಅವರು ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲದೇ ಹಲವು ಟಿವಿ ಷೋಗಳಲ್ಲಿ ಭಾಗವಹಿಸಿದ್ದರು. ನಾದಬ್ರಹ್ಮ ಹಂಸಲೇಖ ಅವರು “ನಿಹಾಲ್ ತಾವ್ರೋ ಅಲ್ಲಪ್ಪಾ ನಿಹಾಲ್ ದೇವ್ರು" ಎಂದಿದ್ದರೆ, ಗಾಯಕ ವಿಜಯ ಪ್ರಕಾಶ್‌ “ನಿಹಾಲ್ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ" ಎಂದು ಝೀ ಕನ್ನಡದ ಷೋದಲ್ಲಿ ಭವಿಷ್ಯ ನುಡಿದಿದ್ದರು.

ತಾವ್ರೋ ಅವರನ್ನು ಬೆಂಬಲಿಸಿ ಆಗಸ್ಟ್ 14ರವರೆಗೆ Sony ಆ್ಯಪ್ ಹಾಗೂ firstcry.com ಮೂಲಕ ಮತಗಳನ್ನು ಚಲಾಯಿಸಿ ಬೆಂಬಲವನ್ನು ವ್ಯಕ್ತ ಪಡಿಸಬಹುದು.

Edited By : Vijay Kumar
Kshetra Samachara

Kshetra Samachara

10/08/2021 11:11 am

Cinque Terre

4.62 K

Cinque Terre

0