ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಚೊರೆ ಮಾಡ್ಬೇಡಿ..." ಮೀನು ಮಾರಾಟಗಾರ, ಇದೀಗ ಭಕ್ತಿಗೀತೆ ಹಾಡುಗಾರ!

ಮಂಗಳೂರು: ಹಸಿ ಮೀನು ಮಾರಾಟ ಸಂದರ್ಭ " ಲಾಕ್ ಡೌನ್ ಬಂದಿದೆ...ಚೊರೆ(ವೃಥಾ ಚರ್ಚೆ) ಮಾಡ್ಬೇಡಿ..." ಎಂದು ಹಾಡಿ, ಕರಾವಳಿಗರಿಂದ 'ಶಹಬ್ಬಾಸ್ ಗಿರಿ' ಪಡೆದಿರುವ ರಾಮ್ ಸಾಲ್ಯಾನ್ ಎಂಬವರು ಇದೀಗ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಹೌದು, ಈ ಪ್ರತಿಭಾನ್ವಿತ ಯುವಕನ ಕಂಠಸಿರಿಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿ ಗಾನ ಸುಧೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸೂರ್ಯರಶ್ಮಿ ಕ್ರಿಯೇಶನ್ಸ್ ಅವರ "ಕಟೀಲ್ದಪ್ಪೆನ ಭಕ್ತಿ ಸುಗಿಪು" ವಿನಲ್ಲಿ ರಾಮ್ ಅವರ ಸುಮಧುರ ಗಾಯನ- ಅಭಿನಯ, ಭಕ್ತಜನರ ಮನ ಗೆಲ್ಲುವಲ್ಲಿ ಸಫಲವಾಗಿದೆ.

Edited By : Manjunath H D
Kshetra Samachara

Kshetra Samachara

12/09/2021 11:06 am

Cinque Terre

10.96 K

Cinque Terre

4

ಸಂಬಂಧಿತ ಸುದ್ದಿ