ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗೇಮ್ ಪಬ್ಜಿ ಬಿಡಿ ಸೈನ್ಯಕ್ಕೆ ಸೇರಿ ರಿಯಲ್ಲಾಗಿಯೇ ಪಬ್ಜಿ ಆಡಿ : ಮಾಜಿ ಸೈನಿಕನಿಂದ ಕಿವಿಮಾತು

ಕುಂದಾಪುರ : ಇಂದಿನ ಯುವ ಜನಾಂಗ ಮೊಬೈಲ್ ನ್ನು ಅವಲಂಭಿಸುತ್ತಿರುವುದು ಆತಂಕಕಾರಿಯಾಗಿದೆ. ಯುವಕರು ಮೊಬೈಲ್ ನಲ್ಲಿ ಪಬ್ಜಿ ಆಡುವುದನ್ನು ನಿಲ್ಲಿಸಿ. ಸೈನ್ಯಕ್ಕೆ ಸೇರಿ ರಿಯಲ್ಲಾಗಿ ಪಬ್ಜಿ ಆಡಬಹುದು ಎಂದು ಮಾಜಿ ಸೈನಿಕ ಸತ್ಯನಾರಾಯಣ ಯುವಕರಿಗೆ ಕಿವಿ ಮಾತು ಹೇಳಿದರು.

ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ನಲ್ಲಿ 20ವರ್ಷದ ಸೇವಾವಧಿ ಮುಗಿಸಿ ತವರಿಗೆ ಆಗಮಿಸಿದ ಬಸ್ರೂರಿನ ಹೆಮ್ಮೆಯ ಯೋಧನಿಗೆ ನಮ್ಮ ಯೋಧ ನಮ್ಮ ಹೆಮ್ಮೆ ತಂಡ ಹಾಗೂ ಬಸ್ರೂರಿನ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

ಭಾನುವಾರ ಸಂಜೆ ವಾಪಾಸ್ಸಾದ ಯೋಧ ಸತ್ಯನಾರಾಯಣ ಅವರನ್ನು ಕುಂದಾಪುರ ಶಾಸ್ತ್ರೀ ವೃತ್ತದಿಂದ ತೆರೆದ ವಾಹನದಲ್ಲಿ ಕುಂದಾಪುರ ಮುಖ್ಯಪೇಟೆಯ ಮೂಲಕ ಬಸ್ರೂರಿನಲ್ಲಿ ಸಿದ್ಧಗೊಂಡಿದ್ದ ವೀರ ಸಾವರ್ಕರ್ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಬಳಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಸತ್ಯನಾರಾಯಣ ಅವರನ್ನು ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಸವರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

11/09/2022 08:54 pm

Cinque Terre

17.71 K

Cinque Terre

1

ಸಂಬಂಧಿತ ಸುದ್ದಿ