ಮುಲ್ಕಿ: ಸಾಹಸಸಿಂಹ, ಅಭಿನಯ, ಮೈಸೂರು ರತ್ನ ಡಾ. ವಿಷ್ಣುವರ್ಧನ್ ಅವರ 72 ನೇ ಹುಟ್ಟು ಹಬ್ಬವನ್ನು ಮುಲ್ಕಿಯ ಲಿಂಗಪ್ಪಯ್ಯ ಕಾಡು ಭಾಗ್ಯವಂತಿ ದೇವಸ್ಥಾನದ ವೇದಿಕೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಯ್ಯ ಹಿರೇಮಠ ಮಾತನಾಡಿ ಡಾ. ವಿಷ್ಣುವರ್ಧನ್ ಹೃದಯವಂತ ವ್ಯಕ್ತಿಯಾಗಿದ್ದು ಸಿಂಹಾದ್ರಿಯ ಸಿಂಹ ನಾಗಿ, ಯಜಮಾನನಾಗಿ ಈಗಲೂ ಅಭಿಮಾನಿಗಳ ಹೃದಯದಲ್ಲಿದ್ದಾರೆ ಎಂದರು
ಈ ಸಂದರ್ಭ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಸಾಯಿ ಪಟೇಲ್ ವಿಷ್ಣುವರ್ಧನ್ ರವರ ಗೀತೆಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ವೇದಿಕೆಯಲ್ಲಿ ಮುಲ್ಕಿ ನಪಂ ಸದಸ್ಯರಾದ ಮಂಜುನಾಥ ಕಂಬಾರ, ಸಂದೀಪ್ ಕುಮಾರ್, ಸಂತೋಷ್ ದೇಸುಣಿಗಿ, ಮುಲ್ಕಿ ಜೆ ಸಿ ಐ ಅಧ್ಯಕ್ಷ ಕಲ್ಲಪ್ಪ ತಡವಲಗ, ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್, ಧರ್ಮಾನಂದ ಶೆಟ್ಟಿಗಾರ,ಪುಂಡಲಿಕ, ಶಿವಕುಮಾರ್ ಇಟಿಗ, ಮಾ. ಮಂಜುನಾಥ್, ಬಲುನೆಲಗಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಚಲನಚಿತ್ರ ಗೀತೆಗಳ ಗಾಯನ ನಡೆಯಿತು.
Kshetra Samachara
18/09/2022 10:52 pm