ಉಡುಪಿ: ಅಮೆರಿಕದ ಸ್ಯಾನ್ ಹೋಸೆ ನಗರವು ಇಂದು ವಿಶೇಷ, ದೈವಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ, ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದರ ಚಾತುರ್ಮಾಸ್ಯದ ವ್ರತ ಸಂಕಲ್ಪ ಕಾರ್ಯಕ್ರಮ ಇದಾಗಿತ್ತು.
ಇದರ ಅಂಗವಾಗಿ ಆಸ್ತಿಕ ಭಕ್ತರರೆಲ್ಲರೂ ತಾಳ ತಾಂಬೂರಿಯೊಡನೆ, ಶ್ರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಅಲಮೇಡಾ ಮುಖ್ಯ ರಸ್ತೆಯಲ್ಲಿ ಶ್ರೀ ವಿಠಲನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಶ್ರೀ ಕೃಷ್ಣ ಬೃಂದಾವನ ಕ್ಷೇತ್ರಕ್ಕೆ ಬಂದರು. ಕ್ಷೇತ್ರವನ್ನು ತಲುಪಿದಾಗ, ಅವರನ್ನು ಪೂರ್ಣ ಕುಂಭದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
ದಾರಿಯುದ್ದಕ್ಕೂ ಹೆಣ್ಣು ಮಕ್ಕಳ ಕೋಲಾಟ, ದಾಸರ ಪೋಷಕಗಳನ್ನು ಧರಿಸಿದ್ದ ಭಕ್ತಾದಿಗಳಿಂದ ಭಾರತವನ್ನೇ ಇಲ್ಲಿ ತಂದಂತಾಯಿತು. ದೀಪ ಪ್ರಜ್ವಾಲನೆಯಿಂದ ಕಾರ್ಯಕ್ರಮ ಪ್ರಾರಂಭವಾಗಿ ದಾಸರಪದ ಮತ್ತು ವಿಶೇಷ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಕೇಶವರಾವ್ ತಾಡಪತ್ರಿ ಹಾಗೂ ಶ್ರೀ ವಿಜಯ ಪುಲ್ಲೂರ್ ಅವರು ಚಾತುರ್ಮಾಸ್ಯದ ಬಗ್ಗೆ ಮಾತುಗಳನ್ನಾಡಿದರು.
ನಂತರ ಅನುಗ್ರಹ ಸಂದೇಶ ನೀಡಿದ ಶ್ರಿ ಸುಗುಣೇಂದ್ರ ತೀರ್ಥರು, ಚಾತುರ್ಮಾಸ್ಯದ ಮಹತ್ವವನ್ನು ಜನರಿಗೆ ತಿಳಿಹೇಳಿ, ತಾವು ಸ್ಯಾನ್ ಹುಸೇ ನಗರಕ್ಕೆ ಬಂದಾಗೆಲ್ಲ ತವರು ಮನೆಗೆ ಬಂದಂತೆ ಆಗುತ್ತದೆ ಎಂಬ ಅನುಭವವನ್ನು ಹಂಚಿಕೊಂಡರು. ಮುಂದಿನ 45 ದಿನಗಳ ಕಾಲ ಕಾರ್ಯಕ್ರಮದ ಯೋಜನೆಗಳ ರೂಪುರೇಷೆಗಳನ್ನು ತಿಳಿಸಿದರು. ಮತ್ತು ಪ್ರಪಂಚದಾದ್ಯಂತ 108 ಕೃಷ್ಣನ ದೇವಾಲಯಗಳನ್ನು ನಿರ್ಮಿಸಬೇಕೆಂಬ ಇಚ್ಛೆಯನ್ನು ಈ ವೇಳೆ ವ್ಯಕ್ತಪಡಿಸಿದರು.
Kshetra Samachara
31/07/2022 04:40 pm